ಚಿಕ್ಕಬಳ್ಳಾಪುರ:ಎತ್ತಿನಹೊಳೆ ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ನ 'ನೀರಿಗಾಗಿ ನಡಿಗೆ' ರ್ಯಾಲಿಗೆ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮೇಕೆದಾಟು ನೀರು ಕರ್ನಾಟಕಕ್ಕೆ ಸೇರಿದ್ದು. ಅದನ್ನು ತಮಿಳುನಾಡು ವಿನಾಕಾರಣ ಅಡ್ಡಿ ಮಾಡುತ್ತಲೇ ಇದೆ. ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ತಪ್ಪೇನಿಲ್ಲ. ಯಾವುದೇ ಘರ್ಷಣೆ, ಗದ್ದಲ ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಯಾತ್ರೆಗೆ ಪರೋಕ್ಷವಾಗಿ ಬೆಂಬಲಿಸಿದ್ದಾರೆ.
ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಕೊರೊನಾ ರೂಲ್ಸ್ ಬ್ರೇಕ್ ಮಾಡದಂತೆ ಪಾದಯಾತ್ರೆ ಮಾಡಲಿ. ಯಾವುದೆ ರೀತಿ ದುರ್ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ನಮ್ಮ ರಾಜ್ಯಕ್ಕೆ ನೀರಾವರಿ ಯೋಜನೆಗಳಲ್ಲಿ ಅನ್ಯಾಯ ಆಗಿದೆ. ತಮಿಳುನಾಡಿನ ಸರ್ಕಾರ ಈ ರೀತಿ ಯಾಕೆ ಮಾಡ್ತಾ ಇದೆಯೋ ಗೊತ್ತಿಲ್ಲ ಎಂದರು.