ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಬಳಿ ನಿನ್ನೆ 8 ಜನರನ್ನು ಬಲಿ ತಗೆದುಕೊಂಡು ಜವರಾಯ ಅಟ್ಟಹಾಸ ಮೆರೆದಿದ್ದ. ಈ ಭೀಕರ ದುರಂತದಲ್ಲಿ ಒಂದು ವರ್ಷದ ಪುಟ್ಟ ಕಂದಮ್ಮನ ಎದುರೇ ಆಕೆಯ ತಂದೆ-ತಾಯಿ ಮೃತಪಟ್ಟಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಜೀಪ್‌ನಲ್ಲಿ 17 ಮಂದಿ ಪ್ರಯಾಣಿಸಿದ್ದು, ದುರಂತದಲ್ಲಿ ಮೃತಪಟ್ಟವರ ಪೈಕಿ ಬಳ್ಳಾರಿ ಮೂಲದ ದಂಪತಿಯೂ ಸೇರಿದ್ದಾರೆ. ಅದೃಷ್ಟವಶಾತ್ ಇವರ ಒಂದು ವರ್ಷದ ಕಂದಮ್ಮ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ಅಪ್ಪ ಅಮ್ಮನನ್ನು ಕಳೆದುಕೊಂಡಿದೆ. ಮೃತ ದಂಪತಿ ಬಳ್ಳಾರಿಯಿಂದ ಇಲ್ಲಿಗೆ ಏಕೆ ಬಂದಿದ್ದರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಮೃತರನ್ನು ಜೀಪಿನ ಚಾಲಕ ರಾಯಲ್ಪಾಡು ರಮೇಶ್, ಸೊಣ್ಣಶೆಟ್ಟಿಹಳ್ಳಿಯ ನಾರಾಯಣಸ್ವಾಮಿ, ಗೌನಿಪಲ್ಲಿಯ ಮುನಿರತ್ನ, ಆಂಧ್ರ ಮೂಲದ ಮದನಪಲ್ಲಿಯ ವೆಂಕಟಲಕ್ಷ್ಮಮ್ಮ, ಬೆಂಗಳೂರು ಮೂಲದ ಮುನಿಕೃಷ್ಣಾ, ಶ್ರೀನಿವಾಸಪುರದ ಕುಸಂದ್ರ ನಿಖಿಲ್, ಬಳ್ಳಾರಿ ಜಿಲ್ಲೆಯ ಕೊಳಗಿಯ ರಾಜಪ್ಪ ಆತನ ಪತ್ನಿ ಮೌನಿಕ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.