ಚಿಕ್ಕಬಳ್ಳಾಪುರ :ರೈತರ ಹಾಗೂ ಊರಿಗೆ ನೀರು ಸರಬರಾಜು ಮಾಡುವ ಪಂಚಾಯತ್ ಕೊಳವೆ ಬಾವಿ ಸೇರಿದಂತೆ, ಐವತ್ತಕ್ಕೂ ಹೆಚ್ಚು ಕೊಳವೆ ಬಾವಿಗಳ ಬಳಿ ಕೇಬಲ್ ಪ್ಯಾನಲ್ ಬೋರ್ಡ್ ಸೇರಿ ಹಲವು ವಸ್ತುಗಳನ್ನು ಕಳ್ಳರು ಒಂದೇ ರಾತ್ರಿಯಲ್ಲಿ ಕದ್ದಿರುವ ಘಟನೆಮುದ್ದೇನಹಳ್ಳಿಯಲ್ಲಿ ನಡೆದಿದೆ.
ತೋಟಗಳ ಬಳಿ ಹೀಗೆ ಪದೇಪದೆ ಕಳ್ಳತನವಾಗುತ್ತಿವೆ. ನಿನ್ನೆ ಒಂದೇ ರಾತ್ರಿಯಲ್ಲಿ ಐವತ್ತು ರೈತರ ತೋಟಗಳ ಬಳಿ ಕಳ್ಳತನವಾಗಿದೆ. ಇದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ರೈತರು ಆರೋಪ ಮಾಡುತ್ತಿದ್ದಾರೆ.
ಪೊಲೀಸ್ ಠಾಣೆ ನಂದಿ ಗ್ರಾಮದಲ್ಲಿದ್ದಾಗ ಕಳ್ಳತನ ನಡೆಯುತ್ತಿರಲಿಲ್ಲ, ಚದಲಪುರ ಗೇಟ್ಗೆ ಠಾಣೆ ವರ್ಗಾವಣೆ ಆದಾಗಿನಿಂದಲೂ ಕಳ್ಳತನಗಳು ಹೆಚ್ಚಾಗಿವೆ. ಮುದ್ದೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಡಹಳ್ಳಿ, ಕಳವಾರ, ಬಚ್ಚಹಳ್ಳಿ, ಮುದ್ದೇನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಕಳ್ಳತನವಾಗಿವೆ.