ಚಿಕ್ಕಬಳ್ಳಾಪುರ: ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 15 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕು ವ್ಯಾಪ್ತಿಯ ಕೆಂದನಹಳ್ಳಿ ಸಮೀಪ ನಡೆದಿದೆ.
ಬೆಂಗಳೂರು ಕಡೆಯಿಂದ ಮದನಪಲ್ಲಿ ಹೋಗುತ್ತಿದ್ದ ಖಾಸಗಿ ಬಸ್ ಕೆಂದನಹಳ್ಳಿ ಬಳಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮದನಪಲ್ಲಿ ಕಡೆಯ ಇಮ್ರಾನ್, ತೀರ್ಥಮ್ಮ, ಸುಕನ್ಯಾ, ನಾರಾಯಣಮ್ಮ, ಸುಜಾತಾ ಹಾಗು ಬೆಂಗಳೂರು ಮೂಲದ ಸೈಯದ್ ಫಾಹಿಮ್, ಹಿದಾಯತ್ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.