ಚಿಕ್ಕಬಳ್ಳಾಪುರ: ಕ್ಷೇತ್ರದ ಜನರನ್ನು ಭೇಟಿ ಮಾಡಲು ನನಗೆ ಪುರುಸೋತ್ತಿಲ್ಲ, ನಮ್ಮ ಸ್ವಂತ ದುಡ್ಡು ಖರ್ಚು ಮಾಡಲು ನಮ್ಮ ಬಳಿ ದುಡ್ಡು ಇಲ್ಲ ಎಂದು ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಹೇಳಿದ್ದಾರೆ.
ಕ್ಷೇತ್ರದ ಜನರಿಗೆ ನೆರವು ನೀಡಲು ನನ್ನ ಬಳಿ ಹಂಗಾಮಿ ದುಡ್ಡಿಲ್ಲ: ಶಾಸಕ ವಿ.ಮುನಿಯಪ್ಪ - ಶಾಸಕ ವಿ.ಮುನಿಯಪ್ಪ
ಜನರಿಗೆ ನೆರವು ನೀಡಲು ನನ್ನ ಬಳಿ ಹಂಗಾಮಿ ದುಡ್ಡು ಇಲ್ಲ. ಹಂಗಾಮಿ ದುಡ್ಡು ಬಂದಿರೋರೆ ಖರ್ಚು ಮಾಡುತ್ತಿಲ್ಲ ಎಂದು ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಹೇಳಿದ್ದಾರೆ.
ಶಾಸಕ ವಿ.ಮುನಿಯಪ್ಪ ಹೇಳಿಕೆ
ಚಿಂತಾಮಣಿಯಲ್ಲಿ ಶಾಸಕ ವಿ.ಮುನಿಯಪ್ಪ ಅವರಿಗೆ ಕೊರೋನ ಸಂದರ್ಭದಲ್ಲಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಜನರಿಗೆ ನೆರವು ನೀಡಲು ನನ್ನ ಬಳಿ ಹಂಗಾಮಿ ದುಡ್ಡು ಇಲ್ಲ. ಹಂಗಾಮಿ ದುಡ್ಡು ಬಂದಿರೋರೆ ಖರ್ಚು ಮಾಡುತ್ತಿಲ್ಲ. ನಮ್ಮ ಹತ್ತಿರ ಏನು ಇಲ್ಲದವರು ಏನು ಖರ್ಚು ಮಾಡಬೇಕು. ನಾನು ನನ್ನ ಕೈಲಾದ ಸೇವೆಯನ್ನ ಮಾಡುತ್ತಿದ್ದೆನೆ ಎಂದರು.