ಕರ್ನಾಟಕ

karnataka

ETV Bharat / state

ನರೇಗಾ ಕಾಮಗಾರಿ ಯೋಜನೆ ಪರಿಶೀಲಿಸಿದ ಶಾಸಕ ಸುಬ್ಬಾರೆಡ್ಡಿ - ದಿಗವೇನಕುಂಟಪಲ್ಲಿ ಗ್ರಾಮ

ದಿಗವೇನಕುಂಟಪಲ್ಲಿ ಗ್ರಾಮಕ್ಕೆ ಶಾಸಕ ಸುಬ್ಬಾರೆಡ್ಡಿ ಭೇಟಿ ನೀಡಿ ನರೇಗಾ ಕಾಮಗಾರಿ ಯೋಜನೆ ಕಾಮಗಾರಿ ಪರಿಶೀಲಿಸಿದರು.

MLA Subba reddy
MLA Subba reddy

By

Published : Jun 13, 2020, 4:36 PM IST

ಚಿಕ್ಕಬಳ್ಳಾಪುರ:ಬಾಗೇಪಲ್ಲಿ ತಾಲೂಕಿನ ದಿಗವೇನಕುಂಟಪಲ್ಲಿ ಗ್ರಾಮಕ್ಕೆ ಶಾಸಕ ಸುಬ್ಬಾರೆಡ್ಡಿ ಭೇಟಿ ನೀಡಿ ನರೇಗಾ ಯೋಜನೆಯ ಅಡಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಕೋವಿಡ್‌-19ನಿಂದ ಬಹಳಷ್ಟು ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಅಂತಹ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಕೆಲಸ ನೀಡುವ ಮೂಲಕ ನೆರವು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿದ್ದು, ರೈತರು, ಕೂಲಿ ಕಾರ್ಮಿಕರು ಸೇರಿದಂತೆ ನಿರುದ್ಯೋಗಿ ಯುವಕರು ಸಹ ನರೇಗಾ ಯೋಜನೆಯಡಿಯಲ್ಲಿ ತಮ್ಮ ಹೆಸರು ನೋಂದಾಯಿಸಿ ಜಾಬ್‌ ಕಾರ್ಡ್‌ ಪಡೆದುಕೊಂಡು ಕೆಲಸ ಮಾಡಬಹುದಾಗಿದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.

ABOUT THE AUTHOR

...view details