ಚಿಕ್ಕಬಳ್ಳಾಪುರ:ಕೊರೊನಾ ಸೋಂಕಿಗೆ ಒಳಗಾದರೆ ಆತಂಕಪಡುವ ಅಗತ್ಯವಿಲ್ಲ. ನಾವು ಎಷ್ಟು ಧೈರ್ಯವಾಗಿ ಇರುತ್ತೇವೆಯೋ ಅಷ್ಟುಬೇಗ ಸೋಂಕಿನಿಂದ ಹೊರಬರುತ್ತೇವೆ. ಮಾನಸಿಕ ಧೈರ್ಯವೇ ಅರ್ಧ ನಮ್ಮನ್ನು ಗುಣಮುಖ ಮಾಡುತ್ತದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಕೊರೊನಾದಿಂದ ಗುಣಮುಖರಾದ ಬಾಗೇಪಲ್ಲಿ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ ಹೇಳಿದ್ದೇನು? - Mla Subbareddy shares his experince
ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ರೋಗಿಗಳ ಸಂಖ್ಯೆ ಹೆಚ್ಚು ಕಡಿಮೆ ಆಗುತ್ತಿದೆ. ಮಳೆಗಾಲದಲ್ಲಿ ಈ ಸಂಖ್ಯೆ ಹಾಗೂ ವೇಗ ಏರುವ ಆತಂಕ ಹೆಚ್ಚಾಗಿದೆ. ಇದರ ನಡುವೆಯೇ ಸಮಾಧಾನದ ವಿಷಯವೆಂದರೆ ಅರ್ಧಕ್ಕರ್ಧ ಕೋವಿಡ್-19 ಪಾಸಿಟಿವ್ ಕೇಸ್ ಇರುವವರು ಹೆಚ್ಚಿನ ಚಿಕಿತ್ಸೆಯೇ ಇಲ್ಲದೆ ಗುಣಮುಖರಾಗುತ್ತಿದ್ದಾರೆ. ಈ ಕುರಿತು ಶಾಸಕ ಸುಬ್ಬಾರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಶಾಸಕ ಸುಬ್ಬರೆಡ್ಡಿ
ನಾನು ಮನೆಯಲ್ಲಿ ಚಿಕಿತ್ಸೆ ಪಡೆದು ಪ್ರತಿ ದಿನ ವಿಟಮಿನ್-ಸಿ ಮಾತ್ರೆ, ರೋಗ ನಿರೋಧಕ ಹೆಚ್ಚಿಸುವ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಬೆಳಗ್ಗೆ ತಿಂಡಿ, ಕಷಾಯ, ಮಧ್ಯಾಹ್ನ ಊಟ, ಸಂಜೆ ಹಣ್ಣು - ಸಿಹಿ, ರಾತ್ರಿ ಊಟ ಸೇರಿದಂತೆ ಬಾದಾಮಿ ಹಾಲು ಸೇವಿಸುತ್ತಿದ್ದೆ. ಸ್ವಲ್ಪ ದಿನಗಳ ಕಾಲ ಧೈರ್ಯವಾಗಿ ಚಿಕಿತ್ಸೆ ಪಡೆದು ನಾನು ಗುಣಮುಖನಾಗಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಓದಿ:ನಮ್ಮ ಪಕ್ಷದಲ್ಲಿ ಯಾವುದೇ ಸಹಿ ಸಂಗ್ರಹ, ಒತ್ತಡಗಳಿಗೆ ಆಸ್ಪದವಿಲ್ಲ: ನಳಿನ್ ಕುಮಾರ್ ಕಟೀಲ್
Last Updated : Jun 7, 2021, 11:00 PM IST