ಚಿಕ್ಕಬಳ್ಳಾಪುರ:ನಿಮ್ಮ ಗುಂಪುಗಳಿಗೆ, ರೌಡಿಸಂಗೆ ನಾನು ಹೆದುರುವುದಿಲ್ಲ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗೆಗ್ಗಿರಾಲ್ಲಹಳ್ಳಿಯಲ್ಲಿ ಗಲಾಟೆ ಮಾಡಿದವರಿಗೆ ವಾರ್ನಿಂಗ್ ಮಾಡಿದ್ದಾರೆ.
ನಿಮ್ಮ ಗುಂಪುಗಳಿಗೆ, ರೌಡಿಸಂಗೆ ನಾನು ಹೆದರೋನಲ್ಲ: ಶಾಸಕ ಸುಬ್ಬಾರೆಡ್ಡಿ - ಶಾಸಕ ಎಸ್.ಎನ್ ಸುಬ್ಬಾರೆಡ್ಡಿ
ಗುಂಪು ಗುಂಪಾಗಿ ಬಂದ್ರೆ, ರೌಡಿಸಂ ಮಾಡೋರಿಗೆ ಹೆದರುವಂತ ಎಂಎಲ್ಎ ನಾನಲ್ಲ. ಬಡವ, ಸ್ವಾಮಿ ಅನ್ನೋರ ಕಾಲು ಹಿಡಿಯೋಕು ನಾನು ರೆಡಿ. ಯಾರಾದ್ರೂ ದೌರ್ಜನ್ಯ ಮಾಡಿದ್ರೆ ಅವರನ್ನ ಮಟ್ಟ ಹಾಕೋದೇ ನನ್ನ ಗುರಿ ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಹೇಳಿದ್ದಾರೆ.

ಎಸ್.ಎನ್ ಸುಬ್ಬಾರೆಡ್ಡಿ
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ
ಗುಡಿಬಂಡೆ ತಾಲೂಕು ಸೋಮೇಶ್ವರ ಗ್ರಾಮದಲ್ಲಿ ಮಾತನಾಡಿದ ಅವರು, ನಾನು ನನ್ನ ಕ್ಷೇತ್ರದಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದೇನೆ. ಆದರೆ ಅದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಗುಂಪು ಗುಂಪಾಗಿ ಬಂದ್ರೆ, ರೌಡಿಸಂ ಮಾಡೋರಿಗೆ ಹೆದರುವಂತ ಎಂಎಲ್ಎ ನಾನಲ್ಲ. ಬಡವ, ಸ್ವಾಮಿ ಅನ್ನೋರ ಕಾಲು ಹಿಡಿಯೋಕು ನಾನು ರೆಡಿ. ಯಾರಾದ್ರೂ ದೌರ್ಜನ್ಯ ಮಾಡುದ್ರೆ ಅವರನ್ನ ಮಟ್ಟ ಹಾಕೋದೇ ನನ್ನ ಗುರಿ ಎಂದರು.