ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನ ಕ್ಷೇತ್ರದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಘೋಷಣೆಗೂ ಮೊದಲೇ ರಣರಂಗವಾಗುತ್ತಿದ್ದು, ಕೈ ಪಕ್ಷ ಬಿಟ್ಟ ನಾಯಕರು ಗಂಡಸ್ಥನ ಇದ್ರೆ ಸವಾಲು ಸ್ವೀಕರಿಸಲಿ ಎಂದು ಕ್ಷೇತ್ರದ ಶಾಸಕ ಹಾಗೂ ಮಾಜಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಸವಾಲು ಹಾಕಿದ್ದಾರೆ.
ತೊಂಡೇಬಾವಿ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸ್ಥಳೀಯ ಪಂಚಾಯಿತಿ ಚುನಾವಣೆಗಳ ಪ್ರಚಾರದ ಸಮಾರಂಭದಲ್ಲಿ ಮಾತನಾಡಿ, ಪಕ್ಷ ತೊರೆದು ಹೋದ ಮುಖಂಡ ಕಾಂತರಾಜ್ ಹಾಗೂ ಸಮಾಜ ಸೇವಕ ಪುಟ್ಟಸ್ವಾಮಿ ಗೌಡರ ವಿರುದ್ಧ ಏಕವಚನದಲ್ಲಿ ಟೀಕೆ ಮಾಡಿ ಗಂಡಸ್ಥನ ವಿದ್ದರೆ ಮೈಕ್ ಹಿಡಿದು ಮಾತುಕತೆಗೆ ಬರುವಂತೆ ಶಾಸಕ ಶಿವಶಂಕರ್ ರೆಡ್ಡಿ ಸವಾಲು ಎಸೆದಿದ್ದಾರೆ.
'ಕೈ' ಬಿಟ್ಟ ನಾಯಕರು ಗಂಡಸ್ಥನ ಇದ್ರೆ ಸವಾಲು ಸ್ವೀಕರಿಸಲಿ: ಮಾಜಿ ಸಚಿವ ಶಿವಶಂಕರ್ ರೆಡ್ಡಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಅಧಿಕಾರ ಅನುಭವಿಸಿ ಪಕ್ಷಕ್ಕೆ ದ್ರೋಹ ಮಾಡಿ, ನಂತರ ದುಡ್ಡಿರುವ ಗಿರಾಕಿ ಬಂದ ಎಂದು ಅವರ ಹಿಂದೆ ಹೋಗುತ್ತಿದ್ದಾರೆ. ದುಡ್ಡು ನಮ್ಮ ಕಡೆಯೂ ಚಲಾವಣೆಯಾಗುತ್ತದೆ. ನಮ್ಮ ಬಳಿಯೂ ಹಣವಿದೆ ಅವರು ಯಾವ ರೀತಿ ಮತಗಳನ್ನು ಕೇಳುತ್ತಾರೆ ನಾನು ಇಲ್ಲೇ ಟೀಕಾಣಿ ಹೂಡುತ್ತೇನೆಂದು ಕಿಡಿಕಾರಿದ್ದಾರೆ.
ಇನ್ನೂ ಇತ್ತೀಚೆಗೆ ನನ್ನ ವಿರುದ್ಧ ಅಪಪ್ರಚಾರಗಳನ್ನು ಮಾಡುತ್ತಾ ನಾನು ಪಕ್ಷ ವಿರೋಧಿ, ಜಾತಿ ವಿರೋಧಿ ಎಂದು ಸಭೆಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ನಿಮ್ಮೆಲ್ಲರ ಮುಂದೆ ಹೇಳಲೀ, ನಾನು ಇಲ್ಲೇ ಇರುವೆ ಗಂಡಸ್ಥನ ಇದ್ರೆ ಸವಾಲು ಸ್ವೀಕರಿಸಿ ಯಾವಾಗ ಬೇಕಾದರು ಬರಲಿ. ನಾನು ಅವರ ಎಲ್ಲಾ ಹೇಳಿಕೆಗೆ ಉತ್ತರ ನೀಡುತ್ತೇನೆ ಎಂದು ಟಾಂಗ್ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಅವರಿಗೆ ಯಾವ ರೀತಿ ಬುದ್ಧಿ ಕಲಿಸಬೇಕು ನನಗೂ ಗೊತ್ತಿದೆ. ನಾನು ಅದನ್ನು ಮಾಡುತ್ತೇನೆ ಎಲ್ಲ ಪಂಚಾಯಿತಿಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅವರಿಗೆ ಉತ್ತರ ಕೊಡುತ್ತೇನೆ ಎಂದು ಸವಾಲು ಎಸೆದಿದ್ದಾರೆ.