ಚಿಂತಾಮಣಿ: ಕುರುಬೂರು ರೇಷ್ಮೆ ಬೆಳೆಗಾರರ ಸೇವಾ ಸಹಕಾರದ ಚುನಾವಣೆಯ ಸಮಯದಲ್ಲಿ ಸಂಘದ ಅಧಿಕಾರ ನಮ್ಮ ವಶಕ್ಕೆ ಬಂದರೆ ಮನೆ ಬಾಗಿಲಿಗೆ ಬಂದು ಸಾಲ ನೀಡುತ್ತೇವೆ ಎಂದು ಹೇಳಿದ್ದು, ಕೊಟ್ಟ ಮಾತಿನಂತೆ ಇಂದು ನಿಮ್ಮ ಮನೆ ಬಾಗಿಲಿಗೆ ಬಂದು ಸಾಲ ನೀಡುತ್ತಿದ್ದೇವೆ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.
ಮಾತು ಕೊಟ್ಟಂತೆ ಮನೆ ಬಾಗಿಲಿಗೆ ಬಂದು ಸಾಲ ನೀಡಿದ್ದೇವೆ: ಶಾಸಕ ಕೃಷ್ಣಾರೆಡ್ಡಿ
ಮಹಿಳೆಯರು ಯಾವ ಉದ್ದೇಶಕ್ಕಾಗಿ ಸಾಲ ಪಡೆಯುತ್ತಿದ್ದೀರೋ ಅದೇ ಉದ್ದೇಶಕ್ಕೆ ಸಾಲದ ಮೊತ್ತವನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು. ಕೋಲಾರ, ಚಿಕ್ಕಬಳ್ಳಾಪುರ ಸಹಕಾರ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಅವರ ಸಹಕಾರದಿಂದ ಇಂದು ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘದಿಂದ ಸಾಲ ನೀಡುತ್ತಿದ್ದೇವೆ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.
ತಾಲೂಕಿನ ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘದ ವತಿಯಿಂದ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘಗಳಿಗೆ 2.65 ಕೋಟಿ ರೂ. ಮೊತ್ತದ ಸಾಲವನ್ನು ಚೆಕ್‌ಗಳ ಮುಖಾಂತರ ವಿತರಿಸಿ ಮಾತನಾಡಿದ ಅವರು, ಸಾಲ ಪಡೆದ ಪ್ರತಿಯೊಬ್ಬರು ಹಂತ ಹಂತವಾಗಿ ಸಾಲ ಮರುಪಾವತಿ ಮಾಡಿ ಇನ್ನೊಬ್ಬರಿಗೆ ಸಾಲ ನೀಡಲು ಹಾಗೂ ನೀವೇ ಮತ್ತೊಮ್ಮೆ ಹೆಚ್ಚಿನ ಮೊತ್ತವನ್ನು ಸಾಲ ಪಡೆಯಲು ಸಹಕರಿಸಬೇಕು ಎಂದರು.
ಈ ವೇಳೆ ಕುರುಬೂರು ರೇಷ್ಮೇ ಬೆಳೆಗಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ಉಪಾಧ್ಯಕ್ಷ ಕೆ.ಎಂ.ಕೃಷ್ಣಪ್ಪ, ನಿರ್ದೇಶಕ ನೇತಾಜಿ ಗೌಡ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.