ಚಿಕ್ಕಬಳ್ಳಾಪುರ: ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಲು ಆಗಲಿಲ್ಲವೆಂಬ ಕಾರಣದಿಂದ ಕೋಪಗೊಂಡು ಅಪ್ರಾಪ್ತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಇದು ಆತ್ಮಹತ್ಯೆಯಲ್ಲ ಬದಲಿಗೆ ಕೊಲೆ ಎಂದು ಬಾಲಕಿ ಪೋಷಕರು ಆರೋಪ ಮಾಡಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಳಗ್ಗೆ 7.30ರ ಸುಮಾರಿಗೆ ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಏನಿದು ಪ್ರಕರಣ: ಗುಡಿಬಂಡೆ ಪಟ್ಟಣದ 5ನೇ ವಾರ್ಡ್ನ ಮಾರುತಿ ಸರ್ಕಲ್ ಬಳಿ 16 ವರ್ಷದ ಬಾಲಕಿ ಮಮತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಮತಾ ಮತ್ತು ಮಹದೇವ(ಮಣಿ) ಇಬ್ಬರು ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಒಂದು ವರ್ಷದಿಂದ ಮಹದೇವ ತನ್ನ ಮನೆಯಲ್ಲೇ ಆಕೆಯನ್ನಿಟ್ಟುಕೊಂಡಿದ್ದು, ಕಳೆದ ಮೂರು ತಿಂಗಳ ಹಿಂದೆ ಮದುವೆಯಾಗಿದ್ದನು ಎನ್ನಲಾಗಿದೆ. ಮೂಲತ ಮಮತಾ ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಬಳಿಯ ಬೇವನಹಳ್ಳಿ ಗ್ರಾಮದ ರಾಜು ಅವರ ಮಗಳು. ಅಲಿಪುರದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಮತಾ 9ನೇ ತರಗತಿ ಓದುತ್ತಿದ್ದಾಗಲೇ ತಾನು ಪ್ರೀತಿಸಿದ ಮಹಾದೇವನ ಜತೆ ಓಡಿ ಹೋಗಿದ್ದಳು.
ಇದನ್ನೂ ಓದಿ: ಪ್ರತಿ ಆನ್ಲೈನ್ ಕ್ಲಾಸ್ ರೆಕಾರ್ಡ್ ಆಗಲಿ.. ತಮಿಳುನಾಡು ಸಿಎಂ ಮಹತ್ವದ ಆದೇಶ
ಇದನ್ನು ತಿಳಿದ ಬಾಲಕಿಯ ಪೋಷಕರು ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ಹಾಗೂ ಅಪಹರಣ ಮಾಡಿಕೊಂಡು ಹೋಗಿದ್ದಾರೆಂದು ದೂರು ಸಹ ನೀಡಿದ್ದರು. ನಂತರ ಮಹದೇವನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕಣ ದಾಖಲಾಗಿತ್ತು. ಮಮತಾಳನ್ನ ಕೆಲ ದಿನಗಳ ಕಾಲ ಚಿಕ್ಕಬಳ್ಳಾಪುರ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಿ, ನಂತರ ಬಾಲಕಿಯ ಪೋಷಕರಿಗೆ ಒಪ್ಪಿಸಿದ್ದಾರೆ.