ಚಿಕ್ಕಬಳ್ಳಾಪುರ :ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗುತ್ತಿವೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಕಾನೂನು ಪಾಲನೆ ಮಾಡಿ ಪರೀಕ್ಷೆ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಆರೋಗ್ಯ ಸಚಿವ ಸುಧಾಕರ್ ಸಲಹೆ ನೀಡಿದ್ದಾರೆ. ಶಾಲೆಗಳಲ್ಲಿನ ಸಮಾನ ಮನಸ್ಥಿತಿ, ಸಮಾನ ಮನೋಭಾವ ಹಾಗೇ ಇರಬೇಕು. ಎಲ್ಲರೂ ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಲು ಮನವಿ ಮಾಡಿದರು.
ಜಾತ್ಯಾತೀತ, ಧರ್ಮಾತೀತವಾಗಿ ಸರ್ಕಾರ ನಿಮ್ಮ ಜತೆಗಿದೆ.. ಸಮವಸ್ತ್ರ ಧರಿಸಿ SSLC ಪರೀಕ್ಷೆಗೆ ಹಾಜರಾಗಿ.. ವಿದ್ಯಾರ್ಥಿಗಳಿಗೆ ಸುಧಾಕರ್ ಮನವಿ - ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ಹೇಳಿಕೆ
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೈಕೋರ್ಟ್ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಶಾಲೆಗಳಲ್ಲಿನ ಸಮಾನ ಮನಸ್ಥಿತಿ, ಸಮಾನ ಮನೋಭಾವ ಹಾಗೇ ಇರಬೇಕು. ಎಲ್ಲರೂ ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಲು ಸಚಿವ ಸುಧಾಕರ್ ಮನವಿ ಮಾಡಿದ್ಧಾರೆ..
![ಜಾತ್ಯಾತೀತ, ಧರ್ಮಾತೀತವಾಗಿ ಸರ್ಕಾರ ನಿಮ್ಮ ಜತೆಗಿದೆ.. ಸಮವಸ್ತ್ರ ಧರಿಸಿ SSLC ಪರೀಕ್ಷೆಗೆ ಹಾಜರಾಗಿ.. ವಿದ್ಯಾರ್ಥಿಗಳಿಗೆ ಸುಧಾಕರ್ ಮನವಿ ವಿದ್ಯಾರ್ಥಿಗಳಿಗೆ ಸುಧಾಕರ್ ಮನವಿ](https://etvbharatimages.akamaized.net/etvbharat/prod-images/768-512-14850903-thumbnail-3x2-mdmd.jpg)
ವಿದ್ಯಾರ್ಥಿಗಳಿಗೆ ಸುಧಾಕರ್ ಮನವಿ
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಚಿವ ಸುಧಾಕರ್ ಮನವಿ ಮಾಡಿರುವುದು..
ನಗರದಲ್ಲಿ ಹಮ್ಮಿಕೊಂಡಿದ್ದ ಕೈವಾರ ತಾತಯ್ಯ ಜಯಂತ್ಯುತ್ಸವದ ನಂತರ ಮಾತನಾಡಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೈಕೋರ್ಟ್ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಡಾ. ಬಿ ಆರ್ ಅಂಬೇಡ್ಕರ್ ನೀಡಿರುವ ಸಂವಿಧಾನಕ್ಕೆ ನಾವೆಲ್ಲರೂ ಗೌರವ ನೀಡಬೇಕಿದೆ. ಪರೀಕ್ಷೆಯನ್ನು ಉತ್ತಮವಾಗಿ ಬರೆದು ಉತ್ತಮ ಅಂಕಗಳನ್ನು ಗಳಿಸಿ. ನಮ್ಮ ನಾಡು ಶಾಂತಿಯ ತೋಟ ಎಂದು ಕುವೆಂಪು ಹೇಳಿದ್ದಾರೆ. ಶಾಂತಿಯ ತೋಟಕ್ಕೆ ನೀವೆಲ್ಲರೂ ಪ್ರೇರಣೆ ಆಗಬೇಕು. ಜಾತ್ಯಾತೀತವಾಗಿ, ಧರ್ಮಾತೀತವಾಗಿ ನಮ್ಮ ಸರಕಾರ ನಿಮ್ಮ ಜೊತೆಗೆ ಇದೆ ಎಂದರು.
TAGGED:
ವಿದ್ಯಾರ್ಥಿಗಳಿಗೆ ಸುಧಾಕರ್ ಮನವಿ