ಕರ್ನಾಟಕ

karnataka

ETV Bharat / state

ನಾವು ಕೋರ್ಟ್​ಗೆ ಹೋಗಿರುವುದು ಪಕ್ಷದ ಪ್ರಮುಖರಿಗೆ ಗೊತ್ತಿದೆ: ಸದಾನಂದಗೌಡರಿಗೆ ಸುಧಾಕರ್​ ತಿರುಗೇಟು - ಸಚಿವ ಡಾ. ಕೆ. ಸುಧಾಕರ್​ ಪ್ರತಿಕ್ರಿಯೆ

Sudhakar reaction on sadanandagowda's statement
ಸದಾನಂದಗೌಡರಿಗೆ ಸುಧಾಕರ್​ ತಿರುಗೇಟು

By

Published : Mar 6, 2021, 1:50 PM IST

Updated : Mar 6, 2021, 4:59 PM IST

13:44 March 06

ಅನಾವಶ್ಯಕವಾಗಿ ಕೋರ್ಟ್​ಗೆ ಹೋಗುವುದು ಒಳ್ಳೆಯದಲ್ಲ ಎಂದು ಹೇಳಿದ್ದ ಕೇಂದ್ರ ಸಚಿವ ಸದಾನಂದಗೌಡರ ಹೇಳಿಕೆಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್​ ಪ್ರತಿಕ್ರಿಯೆ ನೀಡಿದ್ದಾರೆ

ಸದಾನಂದಗೌಡರಿಗೆ ಸುಧಾಕರ್​ ತಿರುಗೇಟು

ಚಿಕ್ಕಬಳ್ಳಾಪುರ:ನಾವು ಕೋರ್ಟ್​ಗೆ ಹೋಗಿರುವುದು ಪಕ್ಷದ ಪ್ರಮುಖರಿಗೆ ಗೊತ್ತಿದೆ. ಅವರ ಸಂದೇಶದಂತೆ ನಾವು ಕೋರ್ಟ್​ ಮೊರೆ ಹೋಗಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಪ್ರತಿಕ್ರಿಯಿಸಿದ್ದಾರೆ.

ಓದಿ: ಸಚಿವರು ಮಾತ್ರ ಅಲ್ಲ, ಎಲ್ಲ ರಾಜಕಾರಣಿಗಳು ಕೋರ್ಟ್​ಗೆ ಹೋಗುತ್ತಾರೆ: ಸಚಿವ ನಾರಾಯಣಗೌಡ

ಅನಾವಶ್ಯಕವಾಗಿ ಕೋರ್ಟ್​ಗೆ ಹೋಗುವುದು ಒಳ್ಳೆಯದಲ್ಲ ಎಂಬ ಕೇಂದ್ರ ಸಚಿವ ಸದಾನಂದಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು. ಈ ಬಗ್ಗೆ  ಪಕ್ಷದ ಪ್ರಮುಖ ಗಮನಕ್ಕೆ ತಂದ ಬಳಿಕವೇ ಕೋರ್ಟ್ ಮೆಟ್ಟಿಲೇರಿದ್ದೇವೆ. ಆದರೆ, ಕೇಂದ್ರ ಸಚಿವ ಸದಾನಂದಗೌಡರಿಗೆ ಮಾಹಿತಿ ಕೊರತೆಯಿದೆ. ಅವರಿಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಇದಕ್ಕೂ ಮುನ್ನ ಸಚಿವರ ನಡೆ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸದಾನಂದಗೌಡ, ವೈಯಕ್ತಿಕವಾಗಿ ಭಾವನೆಗಳನ್ನು ಕೋರ್ಟ್​ನಲ್ಲಿ ವ್ಯಕ್ತಪಡಿಸಬಾರದು ಅಂತಾ ನಾವು ಮಧ್ಯಪ್ರವೇಶ ಮಾಡಲು ಆಗಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಕೂಡ ತನ್ನ ಭವಿಷ್ಯದ ಯೋಚನೆ ಇರುತ್ತದೆ. ಅದು ಅವರವರಿಗೆ ಬಿಟ್ಟ ವಿಚಾರವಾಗಿದ್ದು, ಅನಾವಶ್ಯಕವಾಗಿ ಕೋರ್ಟ್ ಮೊರೆ ಹೋಗುವುದು ಒಳ್ಳೆಯದಲ್ಲ ಎಂದಿದ್ದರು.

Last Updated : Mar 6, 2021, 4:59 PM IST

ABOUT THE AUTHOR

...view details