ಚಿಕ್ಕಬಳ್ಳಾಪುರ:ಎಸ್ಡಿಪಿಐ ಅಂತಹ ಸಮಾಜಘಾತುಕ ಸಂಘಟನೆಯನ್ನು ಬ್ಯಾನ್ ಮಾಡಿದರೆ ಒಳ್ಳೆಯದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮಾಜಘಾತುಕ ಸಂಘಟನೆಯನ್ನು ಬ್ಯಾನ್ ಮಾಡಿದರೆ ಒಳ್ಳೆಯದು: ಸಚಿವ ಸುಧಾಕರ್ - SDPI ban
ಶಾಂತಿ ಕದಡುವ ಪ್ರಯತ್ನ ಮಾಡಿದ ಸಮಾಜಘಾತುಕರು ಎಲ್ಲೆಯೇ ಅಡಗಿ ಕುಳಿತಿರಲಿ, ಸರ್ಕಾರ ಅವರನ್ನು ಬಿಡುವುದಿಲ್ಲ - ಸಚಿವ ಡಾ. ಕೆ ಸುಧಾಕರ್
![ಸಮಾಜಘಾತುಕ ಸಂಘಟನೆಯನ್ನು ಬ್ಯಾನ್ ಮಾಡಿದರೆ ಒಳ್ಳೆಯದು: ಸಚಿವ ಸುಧಾಕರ್ Minister Sudhakar reaction about SDPI Organisation](https://etvbharatimages.akamaized.net/etvbharat/prod-images/768-512-8434486-348-8434486-1597505632854.jpg)
ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಗಲಭೆ ಪೂರ್ವ ನಿಯೋಜಿತ. ಎಸ್ಡಿಪಿಐ ಸಂಘಟನೆ ಹಿಂಸೆಗೆ ದಾರಿ ಮಾಡಿಕೊಟ್ಟಿದ್ದು, ಅಂತಹ ಸಂಘಟನೆಗಳನ್ನು ಬ್ಯಾನ್ ಮಾಡಬೇಕೆಂದರು. ಶಾಂತಿ ಕದಡುವ ಪ್ರಯತ್ನ ಮಾಡಿದ ಸಮಾಜಘಾತುಕರು ಎಲ್ಲೆಯೇ ಇರಲಿ, ಸರ್ಕಾರ ಅವರನ್ನು ಬಿಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಕೊರೊನಾ ಸೋಂಕಿತರ ಸಂಖ್ಯೆ ಇನ್ನೂ ಎರಡು ವಾರಗಳ ಕಾಲ ಹೆಚ್ಚಾಗಲಿದ್ದು, ನಂತರ ಕಡಿಮೆಯಾಗಲಿದೆ ಎನ್ನುವುದು ವೈದ್ಯರ ಮಾತು. ಬೇರೆ ದೇಶಗಳಿಗೂ ನಮ್ಮ ದೇಶಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ನಿಯಂತ್ರಣದಲ್ಲಿದೆ. ಕೊರೊನಾಗೆ ಲಸಿಕೆ ಕಂಡುಹಿಡಿಯಲು ಹಲವು ಸಂಶೋಧನೆಗಳು ನಡೆಯುತ್ತಿದ್ದು, ಇದೇ ವರ್ಷ ಡಿಸೆಂಬರ್ ಅಥವಾ ಜನವರಿ ಒಳಗೆ ಸ್ಪಷ್ಟವಾದ ಲಸಿಕೆ ಹೊರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.