ಚಿಕ್ಕಬಳ್ಳಾಪುರ:ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಅಗಲಿಕೆ ಸಾಕಷ್ಟು ನೋವು ತಂದಿದ್ದು, ಅವರ ಅಭಿಮಾನಿಗಳಿಗೆ ನೋವನ್ನು ಬರೆಸುವ ಶಕ್ತಿ ಕೊಡಲಿ ಎಂದು ಆರೋಗ್ಯ ಸಚಿವ ಸುಧಾಕರ್ ಸಂತಾಪ ಸೂಚಿಸಿದರು. ಸಿದ್ದೇಶ್ವರ ಸ್ವಾಮಿಜೀಯವರ ಅಗಲಿಕೆ ಸಾಕಷ್ಟು ನೋವನ್ನು ತಂದಿದ್ದು ಅವರು ಅಮರವಾಗಿದ್ದು ಮುಕ್ತಿ ಸಿಗಲಿ ಎಂದು ಸಂತಾಪ ಸೂಚಿಸಿದರು.
ದೈಹಿಕವಾಗಿ ಅಗಲಿದರು ಅವರ ಆಶೀರ್ವಾದ ಲೋಕಕಲ್ಯಾಣಕ್ಕಾಗಿ ಎಲ್ಲರ ಮೇಲೂ ಇರುತ್ತೆ. ಕಳೆದ ಆರೇಳು ದಶಕಗಳಿಂದ ಭೋದಿಸಿದ ಆದ್ಯತ್ಮಿಕ ವಿಷಯಗಳ ಬಗ್ಗೆ ಆಶಿರ್ವಾದ ಮಾಡಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಅಸ್ವಸ್ಥ ಆಗಿದ್ದರು. ನಾನು ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೆ. ರೋಗಗಕ್ಕೆ ಚಿಕಿತ್ಸೆ ಕೊಡಬೇಡಿ ನೋವಿಗೆ ಮಾತ್ರ ಚಿಕಿತ್ಸೆ ನೀಡಿ ದೇಹ ಮತ್ತು ದೇವರು ಕರೆಯುವಂತ ಸಂದರ್ಭದಲ್ಲಿ ಬಹಳ ಸಂತೋಷವಾಗಿ ದೇವರ ಬಳಿ ಹೋಗುತ್ತಿದ್ದೇನೆ. ಇಲ್ಲಿ ಇರಬೇಕೆಂಬ ಆಸೆ ನನಗೆ ಇಲ್ಲ ದೇವರು ಕಳುಹಿಸಿಕೊಟ್ಟ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದರು.