ಚಿಕ್ಕಬಳ್ಳಾಪುರ: ಡಾ. ಕೆ. ಸುಧಾಕರ್ ಅವರು ಬಿಜೆಪಿ ಸರ್ಕಾರದ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಂಪುಟ ದರ್ಜೆ ಸಚಿವರಾಗಿ ಇಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿದ್ರು. ಈ ಮೂಲಕ ಜಿಲ್ಲೆಗೆ 30 ವರ್ಷಗಳ ನಂತರ ಸಚಿವ ಸ್ಥಾನ ದೊರೆತಂತಾಗಿದೆ.
ಮೂರು ದಶಕಗಳ ಬಳಿಕ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಂತ್ರಿ ಭಾಗ್ಯ - ಡಾ. ಕೆ. ಸುಧಾಕರ್
ಡಾ. ಕೆ. ಸುಧಾಕರ್ ಅವರು ಇಂದು ನೂತನ ಸಚಿವರಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಜಿಲ್ಲೆಗೆ 30 ವರ್ಷಗಳ ನಂತರ ಸಚಿವ ಸ್ಥಾನ ದೊರೆತಂತಾಗಿದೆ.
![ಮೂರು ದಶಕಗಳ ಬಳಿಕ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಂತ್ರಿ ಭಾಗ್ಯ Chikkaballapur constituency after three decades](https://etvbharatimages.akamaized.net/etvbharat/prod-images/768-512-5981226-thumbnail-3x2-hbl.jpg)
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆತಿರುವುದರಿಂದ ಜಿಲ್ಲೆಯ ಜನರಲ್ಲಿ ಹರ್ಷದ ವಾತಾವರಣ ಉಂಟುಮಾಡಿದೆ. 1982 ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದ ರೇಣುಕಾ ರಾಜೇಂದ್ರನ್ ಅವರು ಗುಂಡೂರಾಯರ ಸಚಿವ ಸಂಪುಟದಲ್ಲಿ ರೇಷ್ಮೆ ಹಾಗೂ ಸಣ್ಣ ಕೈಗಾರಿಕಾ ಸಚಿವರಾಗಿದ್ದರು.
1985ರಲ್ಲಿ ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಚಿಕ್ಕಬಳ್ಳಾಪುರ ಶಾಸಕರಾಗಿದ್ದ ಕೆ. ಎಂ. ಮುನಿಯಪ್ಪರವರು ರೇಷ್ಮೆ ಇಲಾಖೆ ಸಚಿವರಾಗಿದ್ದರು. ಅದಾದ 34 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಡಾ. ಕೆ. ಸುಧಾಕರ್ ಕ್ಯಾಬಿನೆಟ್ ಸಚಿವರಾಗುವ ಮೂಲಕ ಜಿಲ್ಲೆಯ ಜನತೆಯ ಮೂರು ದಶಕಗಳ ಕನಸನ್ನು ಇಂದು ನನಸು ಮಾಡಿದ್ದಾರೆ.