ಕರ್ನಾಟಕ

karnataka

ETV Bharat / state

ವಿಪಕ್ಷದವರ ಜೊತೆ ಮಾತನಾಡಿದರೆ ಪಕ್ಷ ಬದಲಿಸ್ತಾರೆ ಅಂತಲ್ಲ: ಸಚಿವ ಎಂ ಟಿ ಬಿ ನಾಗರಾಜ್

ರಾಜಕೀಯ ಬೇರೆ, ಮಾನವೀಯ ಸಂಬಂಧಗಳು ಬೇರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಿಕ್ಕಾಗ ಕೈ ಕುಲುಕುತ್ತೇವೆ. ಸಿದ್ದರಾಮಯ್ಯ ಕರೆ ಮಾಡುತ್ತಾರೆ. ಈ ಕಾರಣಕ್ಕಾಗಿ ಬಿಜೆಪಿಗರು ಕಾಂಗ್ರೆಸ್​ ಸಂಪರ್ಕದಲ್ಲಿದ್ದಾರೆ ಎಂಬುದು ಸರಿಯಲ್ಲ..

minister-mtb-nagaraj
ಸಚಿವ ಎಂ ಟಿ ಬಿ ನಾಗರಾಜ್

By

Published : Jan 26, 2022, 7:35 PM IST

Updated : Jan 27, 2022, 6:30 PM IST

ಚಿಕ್ಕಬಳ್ಳಾಪುರ :ಉಸ್ತುವಾರಿಗಳ ಬದಲಾವಣೆಯಿಂದ ಮುಂದಿನ ಚುನಾವಣೆಯಲ್ಲಿ ಯಾವುದೇ ಪ್ರತಿಕೂಲ ಪರಿಣಾಮ ಬೀರಲ್ಲ. ನನಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಉಸ್ತುವಾರಿ ಜವಾಬ್ದಾರಿ ಕೊಟ್ಟಿರುವುದು ಸಂತಸ ತಂದಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರೋಗ್ಯ ಸಚಿವರು ಕೋವಿಡ್ ವಿರುದ್ಧ ಉತ್ತಮ ಕೆಲಸ ಮಾಡಿದ್ದಾರೆ. ಗ್ರಾಮೀಣ ಆರೋಗ್ಯ ಕೃಷಿ ಕ್ಷೇತ್ರಗಳಲ್ಲಿ ಸುಧಾರಣೆಯಾಗಿದೆ. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಎರಡು ಕ್ಷೇತ್ರಗಳನ್ನು ಒಟ್ಟಿಗೆ ಅಭಿವೃದ್ದಿ ಮಾಡುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಶಾಸಕರು ಕೈ ನಾಯಕರ ಸಂಪರ್ಕದಲ್ಲಿ ಇದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವರು, ರಾಜಕೀಯ ಬೇರೆ, ಮಾನವೀಯ ಸಂಬಂಧಗಳು ಬೇರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಿಕ್ಕಾಗ ಕೈ ಕುಲುಕುತ್ತೇವೆ. ಸಿದ್ದರಾಮಯ್ಯ ಕರೆ ಮಾಡುತ್ತಾರೆ. ಈ ಕಾರಣಕ್ಕಾಗಿ ಬಿಜೆಪಿಗರು ಕಾಂಗ್ರೆಸ್​ ಸಂಪರ್ಕದಲ್ಲಿದ್ದಾರೆ ಎಂಬುದು ಸರಿಯಲ್ಲ ಎಂದರು.

ಸಚಿವ ಎಂ ಟಿ ಬಿ ನಾಗರಾಜ್

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಂಸದ ಬಚ್ಚೇಗೌಡ ಗೈರು ಹಿನ್ನೆಲೆ ಮಾತನಾಡಿ, ಸಂಸದರು ನಮ್ಮ ಜೊತೆಯಲ್ಲಿ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು. ಯಾವ ಕಾರಣಕ್ಕಾಗಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೋ ಗೊತ್ತಿಲ್ಲ.

ಅವರು 8 ತಾಲೂಕುಗಳಿಗೆ ಸಂಸದರು, ನಾವು ಕೇವಲ ಒಂದು ತಾಲೂಕಿಗೆ ಮಾತ್ರ ಶಾಸಕರು. ಅವರ ಕರ್ತವ್ಯವನ್ನು ಅವರು ನಿಭಾಯಿಸುತ್ತಾರೆ. ನಮ್ಮ ಕೆಲಸ ನಾವು ಮಾಡ್ತೇವೆ ಎಂದು ಉತ್ತರಿಸಿದರು.

ಇದನ್ನೂ ಓದಿ:ಮೈಸೂರು ; ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಂಪತಿ‌ ಆತ್ಮಹತ್ಯೆಗೆ ಶರಣು

Last Updated : Jan 27, 2022, 6:30 PM IST

For All Latest Updates

TAGGED:

ABOUT THE AUTHOR

...view details