ಕರ್ನಾಟಕ

karnataka

ETV Bharat / state

'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಮನರಂಜಿಸಿದ ಸಚಿವ ಡಾ.ಕೆ.ಸುಧಾಕರ್ - ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಿದ್ದ "ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ" ವೇದಿಕೆಯಲ್ಲಿ ಹಾಡು ಹಾಡುವ ಮೂಲಕ ಗ್ರಾಮಸ್ಥರನ್ನು ರಂಜಿಸಿದರು.

ವೇದಿಕೆ ಮೇಲೆ ಹಾಡು ಹೇಳಿದ  ಡಾ.ಕೆ.ಸುಧಾಕರ್
ವೇದಿಕೆ ಮೇಲೆ ಹಾಡು ಹೇಳಿದ ಡಾ.ಕೆ.ಸುಧಾಕರ್

By

Published : Feb 20, 2022, 11:29 AM IST

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮ ಪಂಚಾಯತಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ "ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ" ವೇದಿಕೆ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಡು ಹಾಡುವ ಮೂಲಕ ಗ್ರಾಮಸ್ಥರನ್ನು ಮನರಂಜಿಸಿದರು.

ಗ್ರಾಮದ ಹಲವೆಡೆ ವಿವಿಧ ಕಾರ್ಯಕ್ರಮಗಳಿಗೆ ಹಾಗೂ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಡಾ.ಸುಧಾಕರ್, ನಂತರ ಗ್ರಾಮದ ಮನೆಯೊಂದರಲ್ಲಿ ಊಟ ಸವಿದರು. ಬಳಿಕ ಗ್ರಾಮಸ್ಥರೊಂದಿಗೆ ಮನರಂಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಡಾ.ರಾಜಕುಮಾರ್ ಹಾಡಿರುವ ಜನಪ್ರಿಯ ಹಾಡನ್ನು ಹಾಡಿದರು.

ವೇದಿಕೆ ಮೇಲೆ ಸಚಿವ ಡಾ.ಕೆ.ಸುಧಾಕರ್ ಹಾಡು

ಈ ವೇಳೆ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಕರ್ನಾಟಕ ರಾಜ್ಯ ಮಾವು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು ಉಪಸ್ಥಿತರಿದ್ದು, ಸಚಿವರಿಗೆ ಸಾಥ್ ನೀಡಿ ಎಲ್ಲರ ಗಮನ ಸೆಳೆದರು.

ABOUT THE AUTHOR

...view details