ಚಿಕ್ಕಬಳ್ಳಾಪುರ: ಬಾವಿಯಲ್ಲಿ ಶವವೊಂದು ಪತ್ತೆಯಾದ ಹಿನ್ನೆಲೆ ಗ್ರಾಮಸ್ಥರು ಬೆಚ್ಚಿಬಿದ್ದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಶಿಂಗಸಂದ್ರ ಗ್ರಾಮದಲ್ಲಿ ನಡೆದಿದೆ.
ಬೇರೊಬ್ಬನ ಜೊತೆ ಹೆಂಡತಿ ನಾಪತ್ತೆ: ಗಂಡ ಆತ್ಮಹತ್ಯೆ - ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿ
ಚಿಂತಾಮಣಿ ತಾಲೂಕಿನ ಶಿಂಗಸಂದ್ರ ಗ್ರಾಮದ ತೋಟದ ಬಾವಿಯಲ್ಲಿ ಶವವೊಂದು ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಶಿಂಗಸಂದ್ರ ಗ್ರಾಮದ ಬಾವಿಯಲ್ಲಿ ಶವ ಪತ್ತೆ
ಮೃತ ವ್ಯಕ್ತಿ ತಾಲೂಕಿನ ರಾಂಪುರ ಗ್ರಾಮದ ಮಂಜುನಾಥ(38)ಎಂದು ತಿಳಿದು ಬಂದಿದೆ. ಶಿಂಗಸಂದ್ರ ಗ್ರಾಮದ ಶಂಕರ್ ತೋಟದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಹೆಂಡತಿ ಬೇರೆಯವನ ಜೊತೆ ನಾಪತ್ತೆಯಾದ ಹಿನ್ನೆಲೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.