ಕರ್ನಾಟಕ

karnataka

ETV Bharat / state

ಪೊಲೀಸರಿಗೆ ಮಾಸ್ಕ್​ ವಿತರಿಸಿದ ಬಾಗೇಪಲ್ಲಿ ಪುರಸಭೆ ಸದಸ್ಯರು - Members of the Baghepalli Municipality

ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ಬೆಳಗ್ಗೆಯಿಂದ ರಾತ್ರಿವರೆಗೆ ಬಿಸಿಲಿನಲ್ಲೇ ನಿಂತು ಕೆಲಸ ಮಾಡುವ ಪೊಲೀಸ್‌ ಮತ್ತು ಹೋಂ ಗಾರ್ಡ್ಸ್‌ ಸಿಬ್ಬಂದಿಗೆ ಬಾಗೇಪಲ್ಲಿ ಪುರಸಭೆ ಸದಸ್ಯರು ಉಚಿತವಾಗಿ ಮಾಸ್ಕ್ ವಿತರಿಸಿದ್ರು.

Members of the Baghepalli Municipality who distributed the mask to the police
ಪೊಲೀಸರಿಗೆ ಮಾಸ್ಕ್​ ವಿತರಿಸಿದ ಬಾಗೇಪಲ್ಲಿ ಪುರಸಭೆ ಸದಸ್ಯರು

By

Published : Apr 3, 2020, 11:33 PM IST

ಚಿಕ್ಕಬಳ್ಳಾಪುರ:ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ಬೆಳಗ್ಗೆಯಿಂದ ರಾತ್ರಿವರೆಗೆ ಬಿಸಿಲಿನಲ್ಲೇ ನಿಂತು ಕೆಲಸ ಮಾಡುವ ಪೊಲೀಸ್‌ ಮತ್ತು ಹೋಂ ಗಾರ್ಡ್ಸ್‌ ಸಿಬ್ಬಂದಿಗೆ ಬಾಗೇಪಲ್ಲಿ ಪುರಸಭೆ ಸದಸ್ಯರು ಉಚಿತವಾಗಿ ಮಾಸ್ಕ್ ವಿತರಿಸಿದ್ರು.

ಬಾಗೇಪಲ್ಲಿ ಪಟ್ಟಣದ ಪುರಸಭೆ ಸದಸ್ಯರಾದ 1ನೇ ವಾರ್ಡ ಶ್ರೀನಾಥ್ ಹಾಗೂ 18 ವಾರ್ಡ ಮನ್ಸೂರ್ ಬಾಗೇಪಲ್ಲಿ ಪಟ್ಟಣದ ಸಿಪಿಐ ನಯಾಜ್ ಬೇಗ್ ಹಾಗೂ ಪಿಎಸ್ಐ ಕೆ.ಜಿ.ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಸುಮಾರು 50 ಮಾಸ್ಕ್​ಗಳನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪುರಸಭೆ ಸದಸ್ಯರಾದ ಶ್ರೀನಾಥ್ ಮಾತನಾಡಿ 'ಜನರ ಸೇವೆ ಮಾಡುವ ಪೊಲೀಸರಿಗೆ, ಸಂಕಷ್ಟದ ಸಮಯದಲ್ಲಿ ಏನಾದರೂ ಸಹಾಯ ಮಾಡಬೇಕು ಎಂಬ ಮನೋಭಾವದಿಂದ ವಿತರಣೆ ಮಾಡಿದ್ದೇವೆ ಎಂದು ಹೇಳಿದರು.

ABOUT THE AUTHOR

...view details