ಚಿಕ್ಕಬಳ್ಳಾಪುರ:ಕಾಂಗ್ರೆಸ್ ಪಕ್ಷದವರಿಗೆ ಪದೇಪದೇ ಘರ್ಷಣೆ ಮಾಡಿ ಪಡೆದುಕೊಳ್ಳುವುದು ಅಭ್ಯಾಸವಾಗಿ ಬಿಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ನವರಿಗೆ ಘರ್ಷಣೆ ಮಾಡಿ ಪಡೆದುಕೊಳ್ಳುವುದು ಅಭ್ಯಾಸವಾಗಿ ಬಿಟ್ಟಿದೆ: ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳಿಂದ ಸಂಪೂರ್ಣ ವಿವರಗಳನ್ನು ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಅಭಿವೃದ್ದಿ ಕಾರ್ಯಗಳು ನಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳು ನಡೆಯುತ್ತಿದ್ದು, ಇನ್ನೂ ಹೆಚ್ಚಿನ ಅಭಿವೃದ್ದಿಯಾಗಬೇಕಿದೆ. ವಸತಿ ಹೀನರಿಗೆ ವಸತಿ ಕಲ್ಪಿಸುವ ಯೋಜನೆ ಮಾಡಲಾಗುತ್ತಿದೆ. ಒಂದು ವರ್ಷದೊಳಗೆ ಕುಡಿಯುವ ನೀರಿನ ಘಟಕವನ್ನು ಎಲ್ಲಾ ಗ್ರಾಮಗಳಲ್ಲೂ ಸ್ಥಾಪಿಸಲಾಗುತ್ತದೆ. ಕೃಷಿ ಹಾಗೂ ಶಾಲೆಗಳ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದರು.
ಶಾಸಕರಿಗೆ ಅನುದಾನ ನೀಡುತ್ತಿಲ್ಲ ಎಂಬ ಹೇಳಿಕೆಗೆ ಪ್ರಕ್ರಿಯಿಸಿದ ಅವರು, ಕೊರೊನಾದಿಂದಾಗಿ ಕಳೆದ ಆರು ತಿಂಗಳಿಂದ ವಿಶ್ವದಾದ್ಯಂತ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅದೇ ಪರಿಸ್ಥಿತಿ ಕರ್ನಾಟಕದಲ್ಲೂ ಇದೆ. ಈಗ ಕೇಂದ್ರ ಮಂತ್ರಿಗಳಿಗೂ ಸಹ ಅನುದಾನ ನೀಡುತ್ತಿಲ್ಲ. ಈಗಾಗಲೇ ಜಿಎಸ್ಟಿ ಕೊರತೆ ಸಹ ಇದೆ. ಹಲವಾರು ಅಭಿವೃದ್ದಿಗಳಿಗೆ ಸಾಲಗಳನ್ನು ಮಾಡಲಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ಯಾರು ಸುಸ್ಥಿರವಾಗಿ ಅನುದಾನ ಕೊಟ್ಟಿಲ್ಲ ಎಂದು ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿಗೆ ಟಾಂಗ್ ನೀಡಿದರು.
ಈಶ್ವರ್ ಖಂಡ್ರೆ ಜಿಎಸ್ಟಿ ಹೇಳಿಕೆ ವಿಚಾರ ಪ್ರತಕ್ರಿಯಿಸಿ, ಇವೆಲ್ಲಾ ಕೇವಲ ರಾಜಕೀಯ ಹೇಳಿಕೆಗಳು. ಇನ್ನೂ ಆರ್ಥಿಕ ಪರಿಸ್ಥಿತಿಯಿಂದ ಜಿಎಸ್ಟಿ ಕೋತವಾಗುತ್ತಿರುವುದು ನಿಜ. ಇದರ ಬಗ್ಗೆ ಕೇಂದ್ರ ಸಚಿವರು ಕ್ರಮ ಕೈಗೊಳ್ಳಲಿದ್ದಾರೆ. ಎಲ್ಲಿಯೂ ಸಹ ಘರ್ಷಣೆ ಮಾಡಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್ ಪಕ್ಷದವರಿಗೆ ಪದೇಪದೇ ಘರ್ಷಣೆ ಮಾಡಿ ಪಡೆದುಕೊಳ್ಳುವುದು ಅಭ್ಯಾಸವಾಗಿದೆ. ಆದರೆ, ಬಿಜೆಪಿ ಪಕ್ಷಕ್ಕೆ ಯಾವ ರೀತಿ ಹಣ ತರಬೇಕು, ಯಾವ ರೀತಿ ಅಭಿವೃದ್ದಿ ಮಾಡಬೇಕೆಂಬುದು ಗೊತ್ತಿದೆ ಎಂದರು.
ಡಿಜೆ ಹಳ್ಳಿ ಗಲಭೆ ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಾರತಿಯ ಪ್ರಜೆಯಾಗಿ ಯಾರು ಎಲ್ಲಿಗೆ ಬೇಕಾದರೂ ಹೋಗಲೀ ಎಂದರು. ಜೊತೆಗೆ ಕೇಂದ್ರ ಹಣಕಾಸು ಸಚಿವೆ ಬದಲಾವಣೆಯಾಗಬೇಕೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಕ್ರಿಯಿಸಿ, ಅದನ್ನು ರಾಹುಲ್ ಗಾಂಧಿ ಪ್ರಧಾನಿಯಾದ ಮೇಲೆ ಹೇಳಲಿ ಎಂದು ಲೇವಡಿ ಮಾಡಿದರು.