ಬಾಗೇಪಲ್ಲಿ(ಚಿಕ್ಕಬಳ್ಳಾಪುರ):ಇಂದು ಮೇ ಡೇ, ಅಂದರೆ ಕಾರ್ಮಿಕರ ದಿನಾಚರಣೆ. ಕೊರೊನಾ ವೈರಸ್ ಕಾರಣದಿಂದ ಎಲ್ಲಾ ಕ್ಷೇತ್ರದ ಕಾರ್ಮಿಕರು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ. ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಈ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಎಲ್ಲಾ ಕಷ್ಟಗಳು ಕಳೆದು ಕಾರ್ಮಿಕರ ಜೀವನ ಸಹಜ ಸ್ಥಿತಿಗೆ ಬರುವುದು ಯಾವಾಗ ಎಂದು ಎಲ್ಲರೂ ಕಾಯುತ್ತಿದ್ದಾರೆ.
ಕಾರ್ಮಿಕರ ಜೀವನ ಸಹಜ ಸ್ಥಿತಿಗೆ ತರಲು ಎಲ್ಲರೂ ಶ್ರಮಿಸೋಣ..ಸಿಐಟಿಯು ಅಧ್ಯಕ್ಷ ಆಂಜನೇಯ ರೆಡ್ಡಿ - ಬಾಗೇಪಲ್ಲಿಯಲ್ಲಿ ಮೇ ಡೇ ದಿನ ಆಚರಣೆ
ಕೊರೊನಾದಿಂದಾಗಿ ಎಲ್ಲೆಡೆ ಲಾಕ್ಡೌನ್ ಜಾರಿಯಲ್ಲಿದ್ದು ಉದ್ಯಮಗಳು, ಕೈಗಾರಿಕೆಗಳು ಬಾಗಿಲು ಬಂದ್ ಮಾಡಿ ಕೈ ಕಟ್ಟಿ ಕುಳಿತಿವೆ. ಮೊದಲಿನಂತೆ ಕೈಗಾರಿಕೆಗಳು ಆರಂಭವಾಗಿ ಕಾರ್ಮಿಕರ ಬದುಕನ್ನು ಸಹಜ ಸ್ಥಿತಿಗೆ ತರಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಬಾಗೇಪಲ್ಲಿ ತಾಲೂಕು ಸಿಐಟಿಯು ಅಧ್ಯಕ್ಷರಾದ ಆಂಜನೇಯ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊರೊನಾದಿಂದಾಗಿ ಎಲ್ಲೆಡೆ ಲಾಕ್ಡೌನ್ ಜಾರಿಯಲ್ಲಿದ್ದು ಉದ್ಯಮಗಳು, ಕೈಗಾರಿಕೆಗಳು ಬಾಗಿಲು ಬಂದ್ ಮಾಡಿ ಕೈ ಕಟ್ಟಿ ಕುಳಿತಿವೆ. ಮೊದಲಿನಂತೆ ಕೈಗಾರಿಕೆಗಳು ಆರಂಭವಾಗಿ ಕಾರ್ಮಿಕರ ಬದುಕನ್ನು ಸಹಜ ಸ್ಥಿತಿಗೆ ತರಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಬಾಗೇಪಲ್ಲಿ ತಾಲೂಕು ಸಿಐಟಿಯು ಅಧ್ಯಕ್ಷರಾದ ಆಂಜನೇಯ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಬಾಗೇಪಲ್ಲಿ ಪಟ್ಟಣದ ಹೊರವಲಯದ ಟೊಲ್ ಪ್ಲಾಜಾದಲ್ಲಿ ಮೇ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಧ್ವಜಾರೋಹಣ ಸರಳ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊರೊನಾ ವೈರಸ್ ಹಾವಳಿಯಿಂದ ವಿಶ್ವವ್ಯಾಪಿ ಉತ್ಪಾದನಾ ವಲಯ ಮತ್ತು ಆರ್ಥಿಕ ವಲಯದಲ್ಲಿ ಕುಸಿತ ಉಂಟಾಗಿದೆ. ಇದರ ಪರಿಣಾಮವಾಗಿ ಜಾಗತಿಕ ಆರ್ಥಿಕತೆ ಸಂಕಷ್ಟಕ್ಕೀಡಾಗಿದ್ದು ಹಲವಾರು ರಾಷ್ಟ್ರಗಳಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದರಿಂದ ಜಾಗತಿಕ ನಿರುದ್ಯೋಗ ಸಮಸ್ಯೆ ತಲೆದೋರಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ವೇಳೆ ಕಾರ್ಮಿಕರು ಕಷ್ಟದ ವಿಚಾರದಲ್ಲಿ ಜಾತಿ, ಧರ್ಮದ ವಿಚಾರ ತರಬೇಡಿ, ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಹೆಚ್ಚಿಸುವುದು ಬೇಡ. ಭಾಷಣ ಸಾಕು-ವೇತನ ಬೇಕು, ಉದ್ಯೋಗ ಉಳಿಸಿ-ಆರ್ಥಿಕತೆ ರಕ್ಷಿಸಿ ಸೇರಿದಂತೆ ಇನ್ನಿತರ ಫಲಗಳನ್ನು ಪ್ರದರ್ಶನ ಮಾಡಿ ಅಸಹಾಯಕತೆ ತೋಡಿಕೊಂಡರು.