ಚಿಕ್ಕಬಳ್ಳಾಪುರ:ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ 15 ಕೆಜಿ ಗಾಂಜಾ ವಶಪಡಿಸಿಕೊಂಡ ಘಟನೆ ಗೌರಿಬಿದನೂರು ನಗರದಲ್ಲಿ ನಡೆದಿದೆ. ಆದ್ರೆ ಆರೋಪಿ ಫಿರದಾಸ್ ಖಾನ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಜೈಲು ಸೇರಿ ಹೊರ ಬಂದರೂ ಬಿಡದ ಚಾಳಿ: ಮತ್ತೆ ಗಾಂಜಾ ಮಾರಾಟ, ಆರೋಪಿ ಪರಾರಿ - ಚಿಕ್ಕಬಳ್ಳಾಪುರ ಲೆಟೆಸ್ಟ್ ನ್ಯೂಸ್
ಆರೋಪಿ ಫಿರದಾಸ್ ಖಾನ್ ವಿರುದ್ಧ ಗಾಂಜಾ ಪ್ರಕರಣದಲ್ಲಿ ಬೆಂಗಳೂರು, ತುಮಕೂರು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗಷ್ಟೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ.
![ಜೈಲು ಸೇರಿ ಹೊರ ಬಂದರೂ ಬಿಡದ ಚಾಳಿ: ಮತ್ತೆ ಗಾಂಜಾ ಮಾರಾಟ, ಆರೋಪಿ ಪರಾರಿ marijuan case of chickballapura; accused escaped](https://etvbharatimages.akamaized.net/etvbharat/prod-images/768-512-8842132-thumbnail-3x2-ckbb.jpg)
ಈ ಹಿಂದೆಯೂ ಗಾಂಜಾ ಪ್ರಕರಣದಲ್ಲಿ ಬೆಂಗಳೂರು, ತುಮಕೂರು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗಷ್ಟೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿರುವುದಾಗಿ ತಿಳಿದು ಬಂದಿದೆ. ಈತ ಮತ್ತೆ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರವಿಶಂಕರ್ ಹಾಗೂ ಸಿಪಿಐ ರವಿ ಹಾಗೂ ಪಿಎಸ್ಐ ಚಂದ್ರಕಲಾ ಸಿಬ್ಬಂದಿ ನೇತೃತ್ವದಲ್ಲಿ ನಗರದ ನೆಹರೂಜಿ ಕಾಲೋನಿ ಮನೆಯೊಂದರ ಮೇಲೆ ದಾಳಿ ನಡೆಸಿ ಸುಮಾರು 15 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಆರೋಪಿ ಫಿರದಾಸ್ ಖಾನ್ನ ಅಣ್ಣ ನಗರದ ಮನೆಯೊಂದನ್ನು ಲೀಸ್‌ಗೆ ತಗೆದುಕೊಂಡು ಕಬಾಬ್ ವ್ಯಾಪಾರ ನಡೆಸುತ್ತಿದ್ದ. ತಮ್ಮ ಮನೆಗೆ ಬಂದು ಈ ಕೃತ್ಯದಲ್ಲಿ ತೊಡಿಗಿದ್ದು, ನನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರಲ್ಲಿ ತಿಳಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.