ಬಾಗೇಪಲ್ಲಿ:ಮನೆ ಎದುರು ಗಲಾಟೆ ಮಾಡಬೇಡ ಎಂದಿದ್ದಕ್ಕೆ ಕೋಪಗೊಂಡ ವ್ಯಕ್ತಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗೆ ಬೆಂಕಿ ಹಚ್ಚಿದ ಘಟನೆ ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಆಂಜನಪ್ಪ ಅವರಿಗೆ ಸೇರಿರುವ ಹೋಂಡಾ ಡಿಯೋ ಬೈಕ್ ಸುಟ್ಟುಹೋಗಿದೆ. ಬೆಂಕಿಯಿಂದ ಕಿಟಕಿ, ಗ್ರಾನೈಟ್ ಮತ್ತು ಇತರ ವಸ್ತುಗಳು ಸುಟ್ಟು ಬೂದಿಯಾಗಿವೆ. ಗ್ರಾಮದ ನರಸಿಂಹಮೂರ್ತಿ ಎಂಬಾತ ಕ್ಷುಲ್ಲಕ ಕಾರಣಕ್ಕಾಗಿ ರಾತ್ರಿ 8 ಗಂಟೆ ಸಮಯದಲ್ಲಿ ಆಂಜನಪ್ಪನವರ ಮನೆ ಮುಂಭಾಗದಲ್ಲಿ ಗಲಾಟೆ ಮಾಡುತ್ತಿದ್ದಾಗ, ಮನೆ ಎದುರು ಗಲಾಟೆ ಮಾಡಬೇಡ ಎಂದು ಹೇಳಿದ್ದಾರೆ.