ಚಿಕ್ಕಬಳ್ಳಾಪುರ:ಹೆಂಡತಿಯ ಪ್ರಿಯಕರನಿಂದ ಗಂಡನ ಕೊಲೆ ನಡೆದಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಬೆಳಕಿಗೆ ಬಂದಿದೆ.
ನಗರದ ಅಗ್ರಹಾರ ನಿವಾಸಿ ಸೈಯದ್ ಮುಷ್ಠಕ್ ಕೊಲೆಯಾಗಿರುವ ವ್ಯಕ್ತಿ. ಆತ ಜೀವನಕ್ಕಾಗಿ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಹಲವು ವರ್ಷಗಳ ಹಿಂದೆ ನಗರದ ಟಿಪ್ಪು ನಗರದ ಬಡಾವಣೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದ. ಅದೇ ಬಡಾವಣೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ನವೀದ್ ಮುಷ್ಠಕ್ ಹೆಂಡತಿ ನಸೀಮಾಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ನಿಧಾನವಾಗಿ ಆತನಿಗೆ ಗೊತ್ತಾಗಿದೆ. ಹೀಗಾಗಿ, ಟಿಪ್ಪು ನಗರದಿಂದ ಅಗ್ರಹಾರಕ್ಕೆ ತನ್ನ ಫ್ಯಾಮಿಲಿಯನ್ನು ಶಿಫ್ಟ್ ಮಾಡಿದ್ದಾನೆ.
ಆದರೂ ಸಹವಾಸ ಬಿಡದ ನವೀದ್ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುವ ಮುಷ್ಠಕ್‌ನನ್ನು ಮುಗಿಸಲೇಬೇಕೆಂದು ನಿರ್ಧಾರ ಮಾಡಿ ಮಾತನಾಡುವ ನೆಪದಲ್ಲಿ ಆತನನ್ನು ಚಿಂತಾಮಣಿ ನಗರದ ಅಜಾದ್ ಚೌಕ್ಗೆ ಕರೆಸಿಕೊಂಡು ಚಾಕಿನಿಂದ ಎರಡು ಮೂರು ಬಾರಿ ಇರಿದು ಕೊಲೆ ಮಾಡಿದ್ದಾನೆ.