ಕರ್ನಾಟಕ

karnataka

ETV Bharat / state

ಪತ್ನಿಗೆ ಅಣ್ಣನಿಂದ ಕಿರುಕುಳ: ಮಚ್ಚಿನಿಂದ ಕೊಚ್ಚಿ ಕೊಂದ ತಮ್ಮ - ತಮ್ಮನ ಪತ್ನಿಗೆ ಅಣ್ಣನಿಂದ ಕಿರುಕುಳ

ಹೆಂಡತಿಗೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಅಣ್ಣನನ್ನು ತಮ್ಮ ಮಲಗಿದ್ದ ವೇಳೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಗೌರಿಬಿದನೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ.

man killed by his own brother
ತಮ್ಮನಿಂದ ಅಣ್ಣನ ಕೊಲೆ

By

Published : Jun 10, 2020, 11:25 AM IST

ಚಿಕ್ಕಬಳ್ಳಾಪುರ:ತನ್ನ ಹೆಂಡತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಅಣ್ಣನನ್ನು ತಮ್ಮನೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಮ್ಮನಿಂದ ಅಣ್ಣನ ಕೊಲೆ

ರಮೇಶ್(34) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ತಮ್ಮನ ಹೆಂಡತಿಗೆ ಕೊಲೆಯಾದ ರಮೇಶ್​ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ತಮ್ಮ ಕಳೆದ ರಾತ್ರಿ ಮಲಗಿದ್ದ ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಕೊಲೆಯಾದ ವ್ಯಕ್ತಿಗೆ ಕಳೆದ ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದು ನಾಲ್ಕು ವರ್ಷಗಳಿಂದ ಹೆಂಡತಿ ತನ್ನ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಾಳೆ. ರಮೇಶ್ ತನ್ನ ತಮ್ಮ ಸುರೇಶ್​​ ಹೆಂಡತಿಗೆ ಕಿರುಕುಳ ನೀಡುತ್ತಿದ್ದನ್ನು ಸಹಿಸಲಾಗದೇ ಅಣ್ಣ ಮಲಗಿದ್ದ ವೇಳೆ ರಾತ್ರಿ ಸುರೇಶನೇ ಕೊಲೆ ಮಾಡಿದ್ದಾನೆ.

ಈ ಸುದ್ದಿ ತಿಳಿದು ಸ್ಥಳಕ್ಕೆ ಸಿಪಿಐ ರವಿ ಹಾಗೂ ಪಿಎಸ್ಐ ಅವಿನಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊದಲು ಯಾರೋ ಬೇರೆಯವರು ಕೊಲೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ತಮ್ಮನಾದ ಸುರೇಶನ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದ ವೇಳೆ ಕೃತ್ಯ ನಾನೇ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡು ಸುರೇಶ್​​ ಪೊಲೀಸರಿಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details