ಚಿಕ್ಕಬಳ್ಳಾಪುರ:ಶಿಡ್ಲಘಟ್ಟದಿಂದ ಏರ್ಪೋರ್ಟ್ಗೆ ತೆರಳುತ್ತಿದ್ದ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿವೋರ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೇಲೂರು ಗ್ರಾಮದ ಬಳಿ ನಡೆದಿದೆ.
ಮೇಲೂರು ಗ್ರಾಮದ ಶ್ರೀನಿವಾಸ್ (55) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.

ಶಿಡ್ಲಘಟ್ಟ ನಗರದಿಂದ ಏರ್ಪೋರ್ಟ್ ಗ್ಲೋಬ್ ಗ್ರೌಂಡ್ ಇಂಡಿಯಾ ಸಂಸ್ಥೆಗೆ ಉದ್ಯೋಗಿಗಳನ್ನು ಕರೆದೊಯ್ಯವ ವೇಳೆ ಎಸ್ಆರ್ಎಸ್ ಬಸ್ ಚಾಲಕ ಅಜಾಗರೂಕತೆಯಿಂದ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಸುಮಾರು 3 ಕಿಲೋಮಿಟರ್ ಕ್ರಮಿಸಿ ಮತ್ತೊಂದು ಬಸ್ ಹತ್ತಿ ಪರಾರಿಯಾಗಿದ್ದಾನೆ.
ಇನ್ನು, ಅಧಿಕ ರಕ್ತಸ್ರಾವದಿಂದ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
TAGGED:
Man died in chikballapura