ಚಿಕ್ಕಬಳ್ಳಾಪುರ: ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋನಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೋನಪಲ್ಲಿ ಗ್ರಾಮದ ನರೇಶ್ ಬಾಬು (30) ಎಂದು ತಿಳಿದುಬಂದಿದೆ.
ಇವರು ಮೂರು ತಿಂಗಳ ಹಿಂದಷ್ಟೇ ಚೈತ್ರ ಎಂಬುವರನ್ನು ವಿವಾಹವಾಗಿದ್ದರು. ಆದರೆ ಮನೆಯಲ್ಲಿ ತಂದೆ ಆಂಜಿನೇಯರೆಡ್ಡಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದು, ಇದೇ ವಿಚಾರವಾಗಿ ವಿಷ ಸೇವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.