ಬಾಗೇಪಲ್ಲಿ: ಕೊರೊನಾ ಹಿನ್ನೆಲೆಯ್ಲಿ ಲಾಕ್ಡೌನ್ನಿಂದಾಗಿ ಅನೇಕ ಉದ್ಯಮಗಳಿಗೆ ದೊಡ್ಡ ಹೊಡೆತ ಬಿದ್ದಿದ್ದು ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿದೆ. ಜೊತೆಗೆ ಈ ಮಹಾಮಾರಿಯಿಂದಾಗಿ ರೈತರೂ ಸಹ ಸಂಕಷ್ಟ ಎದುರಿಸುತ್ತಿದ್ದು, ಸೂಕ್ತ ಮಾರುಕಟ್ಟೆ ಇಲ್ಲದೆ ನೂರಾರು ಎಕರೆಯಲ್ಲಿ ಬೆಳೆದಿರುವ ತರಕಾರಿ, ಹಣ್ಣು, ಹೂವುಗಳು ಜಮೀನಿನಲ್ಲೇ ಕೊಳೆಯುತ್ತಿವೆ.
ಕೊರೊನಾ ಕರಿಛಾಯೆ: ಜಮೀನಿನಲ್ಲೇ ಕೊಳೆಯುತ್ತಿರುವ ತರಕಾರಿ, ಹೂ, ಹಣ್ಣುಗಳು - ಕೃಷಿ ಕ್ಷೇತ್ರದ ಮೇಲೆ ಕೊರೊನಾ ಪರಿಣಾಮ
ಕೊರೊನಾ ಹಿನ್ನೆಲೆ ಶುಭ ಸಮಾರಂಭಗಳಿಗೆ ಬ್ರೇಕ್ ಬಿದ್ದ ಪರಿಣಾಮವಾಗಿ ಹಣ್ಣು, ಹೂವು, ತರಕಾರಿ ವ್ಯಾಪಾರಕ್ಕೆ ಬ್ರೇಕ್ ಬಿದ್ದಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.
ಜಮೀನಿನಲ್ಲೇ ಕೊಳೆಯುತ್ತಿರುವ ತರಕಾರಿ, ಹೂ, ಹಣ್ಣುಗಳು
ಕಸಬಾ ಹೋಬಳಿಯಲ್ಲಿ 100 ಎಕರೆ, ಪಾತಪಾಳ್ಯ ಹೋಬಳಿಯಲ್ಲಿ 190 ಎಕರೆ, ಗೂಳೂರು 90 ಎಕರೆ, ಮಿಟ್ಟೇಮರಿ 60 ಎಕರೆ, ಚೇಳೂರು 340 ಎಕರೆ ವಿಸ್ತೀರ್ಣದಲ್ಲಿ ಟೊಮೆಟೊ, ಕ್ಯಾರೆಟ್, ಬೀಟ್ರೂಟ್, ಈರುಳ್ಳಿ, ಕಲ್ಲಂಗಡಿ, ಬದನೆಕಾಯಿ, ಗುಲಾಬಿ, ಸೇವಂತಿಗೆ ಸೇರಿದಂತೆ ವಿವಿಧ ರೀತಿಯ ತರಕಾರಿ ಮತ್ತು ಹೂ ಬೆಳೆಯಲಾಗಿದೆ. ಆದರೆ ಸರಿಯಾದ ಮಾರುಕಟ್ಟೆ ಸಿಗದ ಹಿನ್ನೆಲೆ ಹಾಗೂ ಜಿಲ್ಲಾ ಮತ್ತು ತಾಲೂಕು ಆಡಳಿತ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದ ಕಾರಣ ತರಕಾರಿ, ಹಣ್ಣು, ಹೂವುಗಳು ಜಮೀನಿನಲ್ಲೇ ಕೊಳೆಯುತ್ತಿದ್ದು, ಬಹುತೇಕ ರೈತರು ಸಾಲದ ಸುಳಿಗೆ ಸಿಲುಕುವ ಆತಂಕದಲ್ಲಿದ್ದಾರೆ.