ಕರ್ನಾಟಕ

karnataka

ETV Bharat / state

12 ಲಕ್ಷ ಮೌಲ್ಯದ ಅಕ್ಕಿ, ಲಾರಿಯ ಫೈನಾನ್ಸ್ ಹಣ ವಂಚನೆಗೆ ಸಂಚು: ದೂರು ನೀಡಿದ್ದ ಮಾಲೀಕನೇ ಕಳ್ಳ - ಲಾರಿ ಕಳ್ಳತನ ದೂರು ನೀಡಿದ್ದ ಮಾಲೀಕನ ಬಂಧನ

12 ಲಕ್ಷ ಮೌಲ್ಯದ ಅಕ್ಕಿ, ಲಾರಿಯ ಫೈನಾನ್ಸ್ ಹಣ ವಂಚನೆಗೆ ಸಂಚು ರೂಪಿಸಿದ್ದ ಮಾಲೀಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

lorry-theft-case-accused-arrested-in-chikkaballapura
12 ಲಕ್ಷ ಮೌಲ್ಯದ ಅಕ್ಕಿ, ಲಾರಿಯ ಫೈನಾನ್ಸ್ ಹಣ ವಂಚನೆಗೆ ಸಂಚು... ದೂರು ನೀಡಿದ್ದ ಮಾಲೀಕನೇ ಕಳ್ಳ

By

Published : Oct 13, 2021, 2:52 AM IST

ಚಿಕ್ಕಬಳ್ಳಾಪುರ:ಜಿಲ್ಲೆಯ ಬಾಗೇಪಲ್ಲಿಯಲ್ಲಿ 12 ಲಕ್ಷ ಮೌಲ್ಯದ ಅಕ್ಕಿ, ಲಾರಿಯ ಫೈನಾನ್ಸ್ ಹಣ ವಂಚನೆಗೆ ಸಂಚು ರೂಪಿಸಿದ್ದ ಮಾಲೀಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಜೈ ಮಾರುತಿ ಟ್ರಾನ್ಸ್‌ಪೋರ್ಟ್ ಲಾರಿ ಮಾಲೀಕ ಉಬ್ಬಾಗಿಡ್ಡಯ್ಯ ಹಾಗೂ ಪ್ರದೀಪ್ ಬಂಧನಕೊಳ್ಳಗಾದ ಆರೋಪಿಗಳು.

ಸೆಪ್ಟೆಂಬರ್ 27ರಂದು ಲಾರಿ ಮಾಲೀಕ ಉಬ್ಬಾಗಿಡ್ಡಯ್ಯ ಅಕ್ಕಿ ಸಮೇತ ಲಾರಿ ಕಳುವಾಗಿದೆ ಎಂದು ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ರಾಯಚೂರಿನಿಂದ ಬೆಂಗಳೂರಿಗೆ 30 ಟನ್ ಅಕ್ಕಿ ಸಾಗಾಟ ಮಾಡುತ್ತಿದ್ದ ವೇಳೆ ಬಾಗೇಪಲ್ಲಿ ಸುಂಕಲಮ್ಮ ದೇಗುಲ ಬಳಿ ಲಾರಿ ನಿಲ್ಲಿಸಿದ ವೇಳೆ ಕಳುವಾಗಿದೆ ಎಂದು ದೂರು ನೀಡಲಾಗಿತ್ತು.

ಆದರೆ ಲಾರಿ ಕಳುವಾಗಿಲ್ಲ, ಬದಲಿಗೆ ಅದನ್ನು ಮಾರಾಟ ಮಾಡಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಗಿಡ್ಡಯ್ಯ ಅಕ್ಕಿಯನ್ನು ಆಂಧ್ರದಲ್ಲಿ ಅವಿಸಿಟ್ಟಿದ್ದು, ಲಾರಿಯನ್ನು ತಮಿಳುನಾಡಿನ ಸೇಲಂನಲ್ಲಿ ಗುಜರಿಗೆ ಮಾರಿದ್ದ.

ಲಾರಿ ಜೊತೆ ಆರೋಪಿ

ಸದ್ಯ ಪೊಲೀಸರು ಗಿಡ್ಡಯ್ಯನ ಖತರ್ನಾಕ್ ಪ್ಲಾನ್ ಬಯಲು ಮಾಡಿದ್ದು, ಇವರು 12 ಲಕ್ಷ ಮೌಲ್ಯದ ಅಕ್ಕಿ ಹಾಗೂ ಲಾರಿಯ ಫೈನಾನ್ಸ್ ಹಣ ವಂಚನೆಗೆ ಸಂಚು ರೂಪಿಸಿರುವುದನ್ನು ಬಹಿರಂಗವಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ರೇಷ್ಮೆ ನಗರಿಯಲ್ಲಿ ಗಾಂಜಾ ಗಾಟು: ಪ್ರತ್ಯೇಕ ಪ್ರಕರಣದಲ್ಲಿ 3KGಗೂ ಅಧಿಕ ಗಾಂಜಾ ವಶ.. ಆರೋಪಿಗಳ ಬಂಧನ

ABOUT THE AUTHOR

...view details