ಕರ್ನಾಟಕ

karnataka

ETV Bharat / state

ಲೋಡ್ ತುಂಬಿದ ಲಾರಿ ಉಲ್ಟಾಪಲ್ಟಾ ಹೊಡೆದರೂ ಪವಾಡವೆಂಬಂತೆ ಪಾರಾದ ಚಾಲಕ!! - Lorry Accident news

ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ನಡು ರಸ್ತೆಯಲ್ಲಿ ಮಗುಚಿ ಬಿದ್ದರೂ ಚಾಲಕ ಮಾತ್ರ ಪವಾಡ ಸದೃಶ್ಯ ಪ್ರಾಣಾಪಾಯದಿಂದ ಪಾರಾರಿಗಿದ್ದಾನೆ.

Lorry Accident
ಲೋಡ್ ತುಂಬಿದ ಲಾರಿ ಉಲ್ಟಾಪಲ್ಟಾ ಹೊಡೆದರು ಪವಾಡವೆಂಬಂತೆ ಪಾರಾದ ಚಾಲಕ.!

By

Published : Jan 4, 2020, 4:36 PM IST

ಚಿಕ್ಕಬಳ್ಳಾಪುರ: ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ನಡು ರಸ್ತೆಯಲ್ಲಿ ಮಗುಚಿಕೊಂಡು ಬಿದ್ದ ಪರಿಣಾಮ ಚಾಲಕ ಪ್ರಾಣಾಪಾಯದಿಂದಪವಾಡ ಸದೃಶ್ಯಪಾರಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಾಗರ್ಜುನ ಕಾಲೇಜು ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ.

ಖಾಸಂ ಎಂಬಾತ ಅಪಘಾತದಲ್ಲಿ ಬಚಾವಾದ ಚಾಲಕ ಎಂದು ತಿಳಿದು ಬಂದಿದೆ. ನೆರೆಯ ಆಂಧ್ರದಿಂದ ಬೆಂಗಳೂರಿಗೆ ಬರುತ್ತಿದ್ದ ಸಿಮೆಂಟ್ ಲಾರಿ ನಂದಿ ಕ್ರಾಸ್ ಸರ್ವೀಸ್ ರಸ್ತೆಯಿಂದ ಬೆಂಗಳೂರು ಮಾರ್ಗಕ್ಕೆ ತೆರಳುವಾಗ ಹಂಪ್ ಹತ್ತಿಸುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ.

ಲಾರಿ ಉಟ್ಟಾಪಲ್ಟಾ ಹೊಡೆದರೂ ಚಾಲಕ ಮಾತ್ರ ಪ್ರಾಣಾಪಾಯದಿಂದ ಪಾರಾಗಿ ಸಣ್ಣಪುಟ್ಟ ಗಾಯಗೊಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿಗಿರಿಧಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details