ಕರ್ನಾಟಕ

karnataka

ETV Bharat / state

ನಿಷೇಧಾಜ್ಞೆಯಿಂದ ಬಾಗೇಪಲ್ಲಿ ಸಂಪೂರ್ಣ ಸ್ತಬ್ಧ: ಸಾರಿಗೆ ಸಂಚಾರ ಬಂದ್​ - Corona cases in Chikkaballapur district

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಇಂದು ಲಾಕ್​ಡೌನ್​ ಕಟ್ಟುನಿಟ್ಟಾಗಿ ಪಾಲನೆಯಾಗಿದೆ. ಅಗತ್ಯ ವಸ್ತಗಳಿಗೆ ಮಾತ್ರ ಜನ ಮನೆಯಿಂದ ಹೊರ ಬರುತ್ತಿದ್ದಾರೆ.

dfsf
ನಿಷೇಧಾಜ್ಞೆಯಿಂದ ಬಾಗೇಪಲ್ಲಿ ಸಂಪೂರ್ಣ ಸ್ಥಬ್ಧ:ಸಾರಿಗೆ ಸಂಚಾರ ಬಂದ್​

By

Published : May 24, 2020, 4:17 PM IST

ಬಾಗೇಪಲ್ಲಿ: ಕೊರೊನಾ ತಡೆಗಟ್ಟಲು ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಇಂದು ನಗರವನ್ನು ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ.

ಕರ್ಫ್ಯೂ ಹಿನ್ನೆಲೆ ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳು,ಬಸ್,ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ತುರ್ತು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳು, ಆಸ್ಪತ್ರೆ, ಔಷಧ ಮಳಿಗೆಗಳು ನಂದಿನಿ ಕೇಂದ್ರಗಳು ತೆರೆದಿವೆ. ದಿನಸಿ, ಹಾಲು, ತರಕಾರಿ, ‌ಮಾಂಸ‌ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು,ಸಾರಿಗೆ ಸಂಚಾರ ‌ಸಂಪೂರ್ಣ ಬಂದ್​ ಆಗಿದೆ.

ಎಪಿಎಂಸಿ ಮಾರುಕಟ್ಟೆ ಸಹಿತ ಬಂದ್ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ABOUT THE AUTHOR

...view details