ಚಿಕ್ಕಬಳ್ಳಾಪುರ: ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡಂತೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರ ಲಾಕ್‌ಡೌನ್ ಆದೇಶವನ್ನು ಜಾರಿಗೊಳಿಸಿದ್ದು, ಇಡೀ ದೇಶವೇ ಸ್ಥಬ್ದವಾಗಿದೆ . ಈ ಹಿನ್ನೆಲೆ ಕುಲಕಸುಬು ನಂಬಿಕೊಂಡು ಜೀವನ ಮಾಡುತ್ತಿದ್ದ ಜನರ ಜೀವನ ಸ್ಥಿತಿ ತುಂಬಾ ಶೋಚನೀಯವಾಗಿದೆ.
ಮಹಾಮಾರಿ ಕೊರೊನಾ: ಲಾಕ್ಡೌನ್ನಿಂದ ಕುಲಕಸುಬುದಾರರಿಗೆ ಕುತ್ತು - chikballapura latest news
ಹಕ್ಕಿಪಿಕ್ಕಿ ಕಾಲೋನಿ ನಿವಾಸಿಗಳಿಗೆ ಕೊರೊನಾಗಿಂತಾ ದೊಡ್ಡ ಸಂಕಷ್ಟ ಎದುರಾಗಿದೆ. ಸುಮಾರು 450 ಜನರು ಇಲ್ಲಿ ವಾಸಿಸುತ್ತಿದ್ದು, ಕುಲಕಸುಬಾಗಿ ಬಣ್ಣದ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಕುಟುಂಬಗಳೆಲ್ಲಾ ತೊಡಗಿಕೊಂಡಿವೆ. ಆದರೆ ಲಾಕ್‌ಡೌನ್ ಆದ ಹಿನ್ನೆಲೆ ಇತ್ತ ವ್ಯಾಪಾರವೂ ಇಲ್ಲದೆ ತಿನ್ನಲು ಊಟವು ಇಲ್ಲದೆ ಪರದಾಡುವಂತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 9 ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳಾಗಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಸದ್ಯ ಇದೇ ಈಗ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಿಗೆ ಕೊರೊನಾಗಿಂತಾ ದೊಡ್ಡ ಸಂಕಷ್ಟ ಎದುರಾಗಿದೆ. ಶಾಪವಾಗಿ ಪರಿಣಮಿಸಿದೆ. ಸುಮಾರು 450 ಜನರು ಇಲ್ಲಿ ವಾಸಿಸುತ್ತಿದ್ದು, ಕುಲಕಸುಬಾಗಿ ಬಣ್ಣದ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಕುಟುಂಬಗಳೆಲ್ಲಾ ತೊಡುಗಿಕೊಂಡಿದೆ.ಆದರೆ ಲಾಕ್‌ಡೌನ್ ಆದ ಹಿನ್ನಲೇ ಇತ್ತ ವ್ಯಾಪಾರವು ಇಲ್ಲದೇ,ತಿನ್ನಲು ಊಟವು ಇಲ್ಲದೆ ಪರದಾಡುವಂತಾಗಿದೆ.
ಹೊಟ್ಟೆ ಪಾಡಿಗೆ ನಮಗೆ ವ್ಯಾಪಾರವೊಂದೇ ಮಾರ್ಗವಾಗಿರುವುದರಿಂದ ಪ್ರತಿನಿತ್ಯ ದೇಶದ ಹಲವೆಡೆ ನಡೆಯುವ ಜಾತ್ರೆ, ಹಬ್ಬಗಳ ಸಮಯದಲ್ಲಿ ಬಣ್ಣದ ಅಲಂಕಾರಿಕ ವಸ್ತುಗಳನ್ನು ವ್ಯಾಪಾರ ಮಾಡಲು ಹೋಗಲಾಗುತ್ತಿದ್ದು, ಈಗ ಮನೆಯಿಂದ ಹೊರಗೆ ಬರದಂತೆ ಪೊಲೀಸರು, ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿ ಸಾಧ್ಯವಾಗುತ್ತಿಲ್ಲ, ಜೊತೆಗೆ ವ್ಯಾಪಾರದ ದೃಷ್ಟಿಯಿಂದ ಸಾಕಷ್ಟು ಸಾಲಗಳನ್ನು ಮಾಡಿಕೊಂಡಿದ್ದು ಈಗ ದಿಕ್ಕು ತೋಚದಂತಾಗಿದೆ ಎಂದು ತಮ್ಮ ವ್ಯಾಪಾರಸ್ತರು ತಮ್ಮ ನೋವು ತೋಡಿಕೊಂಡಿದ್ದಾರೆ.