ಬಾಗೇಪಲ್ಲಿ(ಚಿಕ್ಕಬಳ್ಳಾಪುರ) : ಹೆಚ್ಚುವರಿ ಹಣ ಪಡೆದು ಪಡಿತರ ನೀಡುತ್ತಿದ್ದ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ; ಅಂಗಡಿ ಮಾಲೀಕನಿಗೆ ಅಧಿಕಾರಿಗಳಿಂದ ಚಿಕಿತ್ಸೆ - ಚಿಕ್ಕಬಳ್ಳಾಪುರ
ಗೊಲ್ಲಪಲ್ಲಿ ಗ್ರಾಮದ ಲಕ್ಷ್ಮೀಪತಿನಾಯ್ಕರ್ ನ್ಯಾಯಬೆಲೆ ಅಂಗಡಿ (ಸಂ.77) ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಶ್ರೀಮತಿ ಎಂ.ಎನ್.ಲಕ್ಷ್ಮೀನರಸಮ್ಮ ನ್ಯಾಯಬೆಲೆ ಅಂಗಡಿ (ಸಂ.26) ಗಳಲ್ಲಿ ಪಡಿತರ ಚೀಟಿದಾರರಿಂದ ಅಕ್ರಮವಾಗಿ ಹತ್ತರಿಂದ ಇಪ್ಪತ್ತು ರೂಗಳನ್ನು ವಸೂಲಿ ಮಾಡುತ್ತಿದ್ದರು. ಈ ಹಿನ್ನೆಲೆ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಆಡಳಿತದ ವಿರುದ್ಧ ಗೊಲ್ಲಪಲ್ಲಿ ನ್ಯಾಯಬೆಲೆ ಅಂಗಡಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ ಒಂದೇ ದಿನದಲ್ಲಿ ಎಚ್ಚೆತ್ತುಕೊಂಡ ಜಿಲ್ಲಾ ಆಹಾರ ನಾಗರೀಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ,ತಾಲೂಕಿನ ಗೊಲ್ಲಪಲ್ಲಿ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ.
ಗೊಲ್ಲಪಲ್ಲಿ ಗ್ರಾಮದ ಲಕ್ಷ್ಮೀಪತಿನಾಯ್ಕರ್ ನ್ಯಾಯಬೆಲೆ ಅಂಗಡಿ (ಸಂ.77) ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಶ್ರೀಮತಿ ಎಂ.ಎನ್.ಲಕ್ಷ್ಮೀನರಸಮ್ಮ ನ್ಯಾಯಬೆಲೆ ಅಂಗಡಿ (ಸಂ.26) ಗಳಲ್ಲಿ ಪಡಿತರ ಚೀಟಿದಾರರಿಂದ ಅಕ್ರಮವಾಗಿ ಹತ್ತು ಹತ್ತರಿಂದ ಇಪ್ಪತ್ತು ರೂಗಳನ್ನು ವಸೂಲಿ ಮಾಡುತ್ತಿದ್ದರು. ಈ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.