ಕರ್ನಾಟಕ

karnataka

ETV Bharat / state

KMF Recruitment: ಕೊಮುಲ್​ನಲ್ಲಿ 179 ಹುದ್ದೆಗಳಿಗೆ ನೇಮಕಾತಿ.. ಇಲ್ಲಿದೆ ಸಂಪೂರ್ಣ ಮಾಹಿತಿ

ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

KMF Komul Recruitment for 179 post
KMF Komul Recruitment for 179 post

By ETV Bharat Karnataka Team

Published : Sep 7, 2023, 12:39 PM IST

ಕರ್ನಾಟಕ ಹಾಲು ಉತ್ಪಾದಕರ ಸಂಘದಿಂದ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತಕ್ಕೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು, ಲೆಕ್ಕಾಧಿಕಾರಿ ಸೇರಿದಂತೆ ಒಟ್ಟು 179 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ, ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

ಅಧಿಸೂಚನೆ

ಹುದ್ದೆ ವಿವರ:

  • ಸಹಾಯಕ ವ್ಯವಸ್ಥಾಪಕರು (ಎಎಚ್​ ಮತ್ತು ಎಐ) -26
  • ಸಹಾಯಕ ವ್ಯವಸ್ಥಾಪಕರು (ಹಣಕಾಸು ) - 1
  • ತಾಂತ್ರಿಕ ಅಧಿಕಾರಿ ಡಿಟಿ - 15
  • ಮಾರ್ಕೆಟಿಂಗ್​ ಅಧಿಕಾರಿ - 1
  • ಸಿಸ್ಟಂ ಅಧಿಕಾರಿ - 1
  • ಕೃಷಿ ಅಧಿಕಾರಿ - 3
  • ಆಡಳಿತಾತ್ಮಕ ಅಧಿಕಾರಿ - 1
  • ತಾಂತ್ರಿಕ ಅಧಿಕಾರಿ - 1
  • ಲೆಕ್ಕಾಧಿಕಾರಿ - 1
  • ವಿಸ್ತರಣಾಧಿಕಾರಿ ಗ್ರೇಡ್​3 -13
  • ಡೈರಿ ಮೇಲ್ವಿಚಾರಕರು ಗ್ರೇಡ್​2 - 12
  • ಆಡಳಿತಾತ್ಮಕ ಸಹಾಯಕ ಗ್ರೇಡ್​2 -24
  • ಕೆಮಿಸ್ಟ್​ ಗ್ರೇಡ್​2 -21
  • ಅಕೌಂಟ್​ ಅಸಿಸ್ಟಂಟ್​ ಗ್ರೇಡ್​2 -21
  • ಮಾರ್ಕೆಟಿಂಗ್​ ಅಸಿಸ್ಟಂಟ್​ ಗ್ರೇಡ್​2 -11
  • ಜ್ಯೂನಿಯರ್​ ಸಿಸ್ಟಂ ಆಪರೇಟರ್​ -15
  • ಕೊ- ಆರ್ಡಿನೇಟರ್​ - 6

ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ವಾಣಿಜ್ಯ, ಬಿಇ, ಸೇರಿದಂತೆ ಇನ್ನಿತರ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್​ನ ಮೂಲಭೂತ ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿದೆ. ಪದವಿಯಲ್ಲಿ ಕಂಪ್ಯೂಟರ್​ ಅಭ್ಯಾಸ ಮಾಡಿದ ಅಭ್ಯರ್ಥಿಗಳು ಕಂಪ್ಯೂಟರ್​ ಸರ್ಟಿಫಿಕೆಟ್​ ಸಲ್ಲಿಕೆ ಮಾಡಲು ವಿನಾಯಿತಿ ಹೊಂದಿರುತ್ತಾರೆ.

ವೇತನ: ಹುದ್ದೆಗೆ ಅನುಸಾರವಾಗಿ 27650-97100 ರೂ. ವೇತನವನ್ನು ನಿಗದಿಸಲಾಗಿದೆ.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಗರಿಷ್ಠ 35 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ ಮತ್ತು 3 ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ. ಮತ್ತು ಇತರೆ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಈ ಹುದ್ದೆಗಳಿಗೆ ಸೆಪ್ಟೆಂಬರ್​ 5ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 6 ಆಗಿದೆ.

ಈ ಹುದ್ದೆ ನೇಮಕಾತಿಯ ಸಂಪೂರ್ಣ ವಿವರ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು komul.coop ಈ ಜಾಲತಾಣಕ್ಕೆ ಭೇಟಿ ನೀಡಬೇಕಿದೆ.

ಇದನ್ನೂ ಓದಿ: District Court Recruitment: ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ 43 ಹುದ್ದೆಗಳ ನೇಮಕಾತಿ; ಎಸ್​ಎಸ್​ಎಲ್​ಸಿ ಆಗಿದ್ರೆ ಅರ್ಜಿ ಸಲ್ಲಿಸಿ

ABOUT THE AUTHOR

...view details