ಚಿಕ್ಕಬಳ್ಳಾಪುರ: ಸಚಿವ ಸಂಪುಟ ವಿಸ್ತರಣೆಯವರೆಗೂ ಯಾವ ಶಾಸಕರು ಮಾತಾನಾಡದಿದ್ದರೆ ಒಳ್ಳೆಯದು ಎಂದು ಚಿಕ್ಕಬಳ್ಳಾಪುರ ಬಿಜೆಪಿ ಶಾಸಕ ಸುಧಾಕರ್ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಬಿಎಸ್ವೈ ಪರಮೋಚ್ಛ ಅಧಿಕಾರ... ಯಾರು ಮಾತಾನಾಡದಿದ್ದರೆ ಒಳ್ಳೆಯದು: ಸುಧಾಕರ್ - ಕೆ.ಸುಧಾಕರ್ ಲೇಟೆಸ್ಟ್ ನ್ಯೂಸ್
ಸಚಿವ ಸಂಪುಟದ ಬಗ್ಗೆ ಮಾತಾನಾಡಲು ಯಡಿಯೂರಪ್ಪನವರಿಗೆ ಮಾತ್ರ ಅರ್ಹತೆಯಿದೆ, ವಿಸ್ತರಣೆಯವರೆಗೂ ಯಾವ ಶಾಸಕರು ಮಾತಾನಾಡದಿದ್ದರೆ ಒಳ್ಳೆಯದು ಎಂದು ಚಿಕ್ಕಬಳ್ಳಾಪುರ ಬಿಜೆಪಿ ಶಾಸಕ ಸುಧಾಕರ್ ಹೇಳಿದ್ದಾರೆ.
ಸಂಪುಟ ವಿಸ್ತರಣೆಯ ವಿಚಾರ ಯಡಿಯೂರಪ್ಪನವರ ಪರಮೋಚ್ಛ ಅಧಿಕಾರ. ಸಚಿವ ಸಂಪುಟದ ಬಗ್ಗೆ ಯಾರು ಮಾತನಾಡದಿದ್ದರೆ ಒಳ್ಳೆಯದು, ನಾನು ಸಹ ಆ ವಿಚಾರದಲ್ಲಿ ಮಾತಾನಾಡದೇ ಇರುವುದು ಒಳ್ಳೆಯದು. ಸಚಿವ ಸಂಪುಟದ ಬಗ್ಗೆ ಮಾತಾನಾಡಲು ಯಡಿಯೂರಪ್ಪನವರಿಗೆ ಮಾತ್ರ ಅರ್ಹತೆಯಿದೆ ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಅಧಿಕಾರ ನಿರ್ವಹಿಸುತ್ತಿದೆ. ಸಿ.ಟಿ. ರವಿಯವರು ಪ್ರವಾಸೋಧ್ಯಮ ಇಲಾಖೆಯಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರು ಅದರ ಕಡೆ ಗಮನ ಕೊಡಲಿ. ರಾಜ್ಯದಲ್ಲಿ ಎಲ್ಲರು ಉತ್ತಮ ಆಡಳಿತ ನೀಡಿ, ರಾಜ್ಯ ಸರ್ಕಾರಕ್ಕೆ ಗೌರವ ತರುವ ಕೆಲಸ ಮಾಡಬೇಕಾಗಿದೆ. ಯಾರು ಸಹ ಗೊಂದಲದ ಹೇಳಿಕೆಗಳನ್ನ ಕೊಡದೆ ಇರುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.