ಚಿಕ್ಕಬಳ್ಳಾಪುರ: ನಮ್ಮ ಸರ್ಕಾರ ಬಡವರನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವೈಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.
ಬಡವರನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸಲು ಸರ್ಕಾರದಿಂದ ಕ್ರಮ: ಸಚಿವ ಸುಧಾಕರ್ - ಕೆ. ಸುಧಾಕರ್ ನ್ಯೂಸ್
ಸರ್ಕಾರದಿಂದ ಮೆಕ್ಕೆಜೋಳ ರೈತರಿಗೆ 5 ಸಾವಿರ ಪ್ರೋತ್ಸಾಹಧನ, 40 ಸಾವಿರ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ವೈಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.
ಕೋವಿಡ್-19 ಕುರಿತು 6,329 ಜನರನ್ನು ಟೆಸ್ಟ್ ಮಾಡಲಾಗಿದೆ. ರಿಯಲ್ ಟೈಮ್ ಪಿ.ಸಿ.ಆರ್ ಅಳವಡಿಕೆ ನಂತರ 300-400 ಟೆಸ್ಟ್ ಸಾಧ್ಯ. ಆರೋಗ್ಯ, ನರ್ಸಿಂಗ್ ಸಿಬ್ಬಂದಿ ಸೇರಿ ಎಲ್ಲರೂ ಜನರ ಜೀವ ಉಳಿಸಲು ಶ್ರಮಿಸಿದ್ದಾರೆ. ರೈತರ ಕಷ್ಟ ನಮಗೆ ಚೆನ್ನಾಗಿ ಗೊತ್ತಿದೆ. ಇದರ ಸಲುವಾಗಿಯೇ ಪರಿಹಾರ ಘೋಷಣೆ ಮಾಡಲಾಗಿದೆ. ಮೆಕ್ಕೆಜೋಳ ರೈತರಿಗೆ 5 ಸಾವಿರ ಪ್ರೋತ್ಸಾಹಧನ, 40 ಸಾವಿರ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆತಂಕ ಬೇಡ. ಇನ್ನೂ ಹೆಚ್ಚಿನ ಜನ ರಾಜ್ಯಕ್ಕೆ ಬರುತ್ತಿದ್ದಾರೆ. 50 ಪ್ರಕರಣಗಳು ದುಬೈನಿಂದ ಬಂದಿವೆ. ಮಹಾರಾಷ್ಟ್ರದಿಂದ ಒಂದಿಷ್ಟು ಪ್ರಕರಣ ಬಂದಿವೆ. ಸಮುದಾಯದಲ್ಲಿ ಸೋಂಕು ಹರಡದ ಹಾಗೆ ಜನರು ತಮ್ಮ ಆರೋಗ್ಯದ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಅದೇ ರೀತಿ ಬೇರೆ ಕಡೆಯಿಂದ ಬಂದವರನ್ನು ನಿಮ್ಮ ಊರಿಗೆ ಕಳಿಸಿಕೊಡವ ಜವಾಬ್ದಾರಿ ಸರ್ಕಾರದ್ದು. ಯಾರೆಲ್ಲಾ ಹೋಗಬೇಕಿದೆ, ಬರಬೇಕಿದೆ ಎಂಬ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಯಾರೂ ಆಂತಕ ಪಡುವುದು ಬೇಡ ಎಂದರು.