ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಕಳ್ಳತನವಾಗಿ 5 ದಿನಗಳಾದರೂ ಕೇಸು ದಾಖಲಿಸದ ಪೊಲೀಸರು - ಚಿಕ್ಕಬಳ್ಳಾಪುರದಲ್ಲಿ ಮನೆ ಕಳ್ಳತನ

ಪೊಲೀಸರು ಮನೆಕಳ್ಳತನ ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಕುಟುಂಬವೊಂದು ಆರೋಪಿಸಿದೆ.

Kn_ckb_01_16_theft_pkg_ka10046
ಚಿನ್ನಾಭರಣ ಕಳ್ಳತನ

By

Published : Aug 16, 2022, 11:01 PM IST

ಚಿಕ್ಕಬಳ್ಳಾಪುರ: ನಗರದ ಕಂದವಾರ ಬಾಗಿಲು ಪ್ರದೇಶದ ನಿವಾಸಿ ನರಸಮ್ಮ ಕೂಲಿ ಕೆಲಸ ಮಾಡಿಕೊಂಡಿದ್ದು, ಮಗಳ ಮದುವೆಗೆಂದು ಚಿನ್ನಾಭರಣ ಮಾಡಿಸಿಟ್ಟಿದ್ದರು. ಐದು ದಿನಗಳ ಹಿಂದೆ ಹಾಡಹಗಲೇ ಕಳ್ಳರು ಇವರ ಮನೆಗೆ ಕನ್ನ ಹಾಕಿ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಘಟನೆ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ದೂರು ಪಡೆಯದೆ ಬೇಜವಾಬ್ದಾರಿತನ ತೋರಿಸುತ್ತಿದ್ದಾರೆಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಚಿನ್ನಾಭರಣ ಕಳ್ಳತನ ಪ್ರಕರಣ

ABOUT THE AUTHOR

...view details