ಕರ್ನಾಟಕ

karnataka

ETV Bharat / state

ಈ ಬಾರಿಯೂ ಚಿಂತಾಮಣಿ ನಗರಸಭೆ ಜೆಡಿಎಸ್ ಪಕ್ಷಕ್ಕೆ ಸೇರಲಿದೆ: ಎಂ.ಕೃಷ್ಣಾರೆಡ್ಡಿ ವಿಶ್ವಾಸ - ಚಿಂತಾಮಣಿ ನಗರಸಭೆ ಚುನಾವಣೆ ಕುರಿತ ಸುದ್ದಿ

ಈ ಬಾರಿಯೂ ಚಿಂತಾಮಣಿ ನಗರಸಭೆ ಜೆಡಿಎಸ್ ಪಕ್ಷಕ್ಕೆ ಸೇರಲಿದೆ ಎಂದು ನಗರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ಉಪಸಭಾಧ್ಯಕ್ಷ ಹಾಗೂ ಚಿಂತಾಮಣಿ ಕ್ಷೇತ್ರದ ಶಾಸಕ ಎಂ.ಕೃಷ್ಣಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಉಪಸಭಾಧ್ಯಕ್ಷ ಹಾಗೂ ಚಿಂತಾಮಣಿ ಕ್ಷೇತ್ರದ ಶಾಸಕ ಎಂ ಕೃಷ್ಣಾರೆಡ್ಡಿ

By

Published : Nov 7, 2019, 11:51 PM IST

ಚಿಕ್ಕಬಳ್ಳಾಪುರ:ಚಿಂತಾಮಣಿ ನಗರಸಭೆ ಚುನಾವಣೆ ಹಿನ್ನೆಲೆ ನಗರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ಎಂ. ಕೃಷ್ಣಾರೆಡ್ಡಿ, ಈ ಬಾರಿಯೂ ನಗರಸಭೆ ಜೆಡಿಎಸ್ ಪಕ್ಷಕ್ಕೆ ಸೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದು, ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಜೆಡಿಎಸ್ ಪಕ್ಷದ ವಿರುದ್ದ ನಡೆಸಿದ ವಾಗ್ದಾಳಿಯನ್ನು ತಳ್ಳಿ ಹಾಕಿದ್ದಾರೆ.

ಉಪಸಭಾಧ್ಯಕ್ಷ ಹಾಗೂ ಚಿಂತಾಮಣಿ ಕ್ಷೇತ್ರದ ಶಾಸಕ ಎಂ ಕೃಷ್ಣಾರೆಡ್ಡಿ

ಇನ್ನೂ ಜೆಡಿಎಸ್​ ಪಕ್ಷದ ಮಾಜಿ ಶಾಸಕರು ಭಾರತಿಯ ಜನತಾ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ ಎಂಬ ವದಂತಿಗೆ ಉತ್ತರಿಸಿದ ಉಪಸಭಾಧ್ಯಕ್ಷ ಹಾಗೂ ಚಿಂತಾಮಣಿ ಕ್ಷೇತ್ರದ ಶಾಸಕ ಎಂ.ಕೃಷ್ಣಾರೆಡ್ಡಿ, ಯಾರೋ ಹೇಳಿದ ಹೇಳಿಕೆಯನ್ನು ಜೆಡಿಎಸ್ ಪಕ್ಷದ ಮೇಲೆ ತಳ್ಳಿ ಹಾಕುವುದು ಸರಿಯಿಲ್ಲ. ಮೊದಲು ಹೇಳಿಕೆಯನ್ನು ಯಾರು ನೀಡಿದ್ದಾರೆಂಬುವುದನ್ನು ತಿಳಿದು ಕೊಳ್ಳಬೇಕು, ಇಲ್ಲಸಲ್ಲದ ಆರೋಪ ಮಾಡುವುದು ಸರಿಯಿಲ್ಲಾ ಎಂದು ಹೇಳಿದರು.

ನೂರು ದಿನಗಳಲ್ಲಿ ಬಿಜೆಪಿ ಪಕ್ಷ ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ, ಪುಸ್ತಕಗಳಿಗೆ ಮಾತ್ರ ಸೂಕ್ತವಾಗಿದೆ. ಮಳೆಯಿಂದ ಸಾಕಷ್ಟು ಜಿಲ್ಲೆಗಳಲ್ಲಿ ನಷ್ಟವಾಗಿದೆ. ಮುಖ್ಯಮಂತ್ರಿಗಳೇ 40 ಸಾವಿರ ಕೋಟಿ ರೂ ನಷ್ಟವಾಗಿದೆ ಎಂದು ಹೇಳಿದ್ದಾರೆ. ಆದರೆ ಜನರು ಮಾತ್ರ ಸೂಕ್ತವಾದ ಮನೆ ಮಳೆಗೆಗಳಿಲ್ಲದೆ ಬೀದಿಗಳಲ್ಲಿ ಸಾಯುತ್ತಿದ್ದಾರೆ. ನಾಮಕಾವಸ್ಥೆಗೆ ಪುಸ್ತಕಗಳನ್ನು ಬಿಡುಗಡೆ ಮಾಡುಕೊಂಡಿದ್ದಾರೆ ಎಂದು ಇದೇ ವೇಳೆ ಗುಡುಗಿದರು.

For All Latest Updates

TAGGED:

ABOUT THE AUTHOR

...view details