ಕರ್ನಾಟಕ

karnataka

ETV Bharat / state

ದೇಶದಲ್ಲಿ ಮೋದಿ ಆಡಳಿತ ಇರುವಾಗ ಜನಾರ್ದನ್​ ರೆಡ್ಡಿ ಈ ನಿರ್ಧಾರ ಮಾಡಬಾರದಿತ್ತು: ಆರೋಗ್ಯ ಸಚಿವ ಸುಧಾಕರ್ - ETV Bharath Kannada news

ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ಸು ಸಾಧಿಸುವುದು ಕಷ್ಟ - ಪಕ್ಷದ ಜೊತೆ ಚರ್ಚೆ ಮಾಡಿದ್ದರೆ ಅವರ ವೈಯಕ್ತಿಕ ಭಾವನೆಗಳಿಗೆ ಸರಿಯಾದ ನಿಲುವು ದೊರೆಯುತ್ತಿತ್ತು - ದೇಶದಲ್ಲಿ ಮೋದಿ ಆಡಳಿತ ಇರುವಾಗ ರೆಡ್ಡಿ ಈ ನಿರ್ಧಾರ ಮಾಡಬಾರದಿತ್ತು ಎಂದ ಸಚಿವ ಸುಧಾಕರ್​

k-sudhakar
ಆರೋಗ್ಯ ಸಚಿವ ಸುಧಾಕರ್

By

Published : Dec 26, 2022, 1:31 PM IST

ಜನಾರ್ಧನ ರೆಡ್ಡಿ ಮತ್ತೆ ಬಿಜೆಪಿ‌ ಪಕ್ಷಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ.

ಚಿಕ್ಕಬಳ್ಳಾಪುರ:ಬಿಜೆಪಿ ಸರ್ಕಾರ ರಚಿಸುವುದರಲ್ಲಿ ಜನಾರ್ದನ್​ ರೆಡ್ಡಿ‌ ಅವರ ಪಾತ್ರ ಹೆಚ್ಚಾಗಿತ್ತು ಆದರೆ ಕೆಲವು ಭಿನ್ನಾಭಿಪ್ರಾಯಗಳಿಂದ ನೂತನ‌ ಪಕ್ಷ ಪ್ರಾರಂಭಿಸುವ ನಿರ್ಧಾರ ತೆಗೆದುಕೊಂಡಿದ್ದಾರೆಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ಕೊಟ್ಟಿದ್ದಾರೆ.

ಬೂಸ್ಟರ್ ಡೋಸ್ ಕಡ್ಡಾಯ:ಕೊರೊನಾ ಅಂಕಿಅಂಶಗಳ ಬಗ್ಗೆ ವಿಪಕ್ಷಗಳು ಉಡಾಫೆ ಮತನಾಡುತ್ತಿವೆ. ಅದಕ್ಕೆ ಎಲ್ಲಾ ರಾಜ್ಯಗಳಲ್ಲೂ ಅವರನ್ನು ನಿರ್ನಾಮ ಮಾಡುತ್ತಿದ್ದಾರೆ. ಜನರ ಆರೋಗ್ಯದ ಬಗ್ಗೆ ಉಡಾಫೆಯಾಗಿ ಮಾತಾಡೋರಿಗೆ ಜನರ ಉತ್ತರ ಕೊಡುತ್ತಿದ್ದಾರೆ. ಮೊದಲು ಎರಡನೇ ಅಲೆಯಲ್ಲಿ ಆದ ಅನಾಹುತ ಆಗೋದು ಬೇಡ, ಅದಕ್ಕೆ ಏನೆಲ್ಲಾ ಕ್ರಮ ಜರುಗಿಸಬೇಕು ಅಂದು ಸಭೆ ಮಾಡುತ್ತಿದ್ದೇವೆ. ಜನಜಂಗುಳಿ ಇರೋ ಕಡೆ ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. ಜೊತೆಗೆ ಬೂಸ್ಟರ್ ಡೋಸ್ ತೆಗೆದುಕೊಳ್ಳೋರು ಇನ್ನೂ ಇದ್ದಾರೆ. ಎಲ್ಲರೂ ಕಡ್ಡಾಯವಾಗಿ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ರೆಡ್ಡಿಗೆ ಬಿಜೆಪಿ ಜೊತೆ ಮುನಿಸು ಇರಲಿಲ್ಲ:ಜನಾರ್ದನ್​ ರೆಡ್ಡಿ ಹೊಸ ಪಕ್ಷ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಬಿಜೆಪಿ ಜೊತೆ ರೆಡ್ಡಿಗೆ ಮುನಿಸು ಇರಲಿಲ್ಲ. ಆದರೆ ವೈಯಕ್ತಿಕ ಭಾವನೆಗಳಿದ್ದವು. ರೆಡ್ಡಿ ಭಾವನೆಗಳ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ್ದೆ. ನಾನು ಇತ್ತೀಚಿಗೆ ಜನಾರ್ದನ್​ ರೆಡ್ಡಿಯನ್ನು ಭೇಟಿ ಮಾಡಿ ಮಾತನಾಡಿದ್ದೆ ಎಂದು ಹೇಳಿದರು.

ಮೋದಿ ಆಡಳಿತದಲ್ಲಿ ಈ ರೀತಿ ಯೋಚನೆ ಮಾಡಬಾದಿತ್ತು:ನನ್ನ ಬಳಿಯೂ ಕೆಲವು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದರು. ಏನೇ ಬಿನ್ನಾಭಿಪ್ರಾಯಗಳು ಇದ್ದರೂ ಬಗೆಯರಿಸಬಹದಿತ್ತು. ಮುಂದೆ ಮತ್ತೆ ಬಿಜೆಪಿ‌ ಬರಲಿದ್ದಾರೆ ಎಂಬುದು ನನ್ನ ವೈಯಕ್ತಿಕ ವಿಚಾರವಾಗಿದೆ. ಇನ್ನು ಪ್ರಾದೇಶಿಕ ಪಕ್ಷ ಯಶಸ್ಸು ಬಹಳ ಕಷ್ಟವಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಜನಾರ್ದನ್​ ರೆಡ್ಡಿ ಈ ರೀತಿಯ ಆಲೋಚನೆ ಮಾಡಬಾರದಿತ್ತು ಎಂದು ಹೇಳಿಕೆ‌ ಕೊಟ್ಟಿದ್ದಾರೆ.

ಇದ್ನನೂ ಓದಿ:ರಾಜಕಾರಣಕ್ಕೆ ಗಣಿಧಣಿ ರೀ ಎಂಟ್ರಿ: ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಜನಾರ್ದನ ರೆಡ್ಡಿ ಘೋಷಣೆ

ABOUT THE AUTHOR

...view details