ಚಿಕ್ಕಬಳ್ಳಾಪುರ: ವೀರ ಸಾವರ್ಕರ್ ಫೋಟೋ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಸುವರ್ಣಸೌಧದಲ್ಲಿ ವೀರ ಸಾವರ್ಕರ್ ಫೋಟೋಗೆ ಕಾಂಗ್ರೆಸ್ ಆಕ್ಷೇಪ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಕಿಡಿಕಾರಿದ್ದಾರೆ.
ವೀರ ಸಾವರ್ಕರ್ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ತಮ್ಮ ಯೌವ್ವನವನ್ನೇ ಸ್ವಾತಂತ್ರ್ಯ ಹೋರಾಟಕ್ಕೆ ಮುಡಿಪಾಗಿಟ್ಟವರು. ವೀರ ಸಾವರ್ಕರ್ ಫೋಟೋಗೆ ಕಾಂಗ್ರೆಸ್ ಆಕ್ಷೇಪ ಸರಿ ಅಲ್ಲ. ಎಲ್ಲವನ್ನೂ ರಾಜಕಾರಣದ ಉದ್ದೇಶದಿಂದ ನೋಡೋದು ಕಾಂಗ್ರೆಸ್ಗೆ ಹವ್ಯಾಸ. ಸದನದಲ್ಲಿ ಜನಪರ ವಿಷಯಗಳನ್ನು ಚರ್ಚೆ ಮಾಡಲು ಕಾಂಗ್ರೆಸ್ ಪಕ್ಷದವರ ಬಳಿ ವಿಷಯಗಳಿಲ್ಲ. ರಚನಾತ್ಮಕ ಸಲಹೆಗಳನ್ನು ಕೊಡೋದು ಬಿಟ್ಟು ಪ್ರತಿಭಟನೆ ಮಾಡೋದು ಸರಿ ಅಲ್ಲ. ಇದು ರಾಜ್ಯದ ಜನರಿಗೆ ಮಾಡ್ತಿರೋ ಅವಮಾನ, ಅಪಮಾನವಾಗಿದೆ ಎಂದು ಉತ್ತರಿಸಿದರು.