ಬಾಗೇಪಲ್ಲಿ: ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲಿಂಪಲ್ಲಿ ಗ್ರಾಮದಲ್ಲಿ ರಾಸುಗಳ ಮೈ ಮೇಲೆ ಬೊಬ್ಬೆಗಳು ಎದ್ದು, ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತಿದೆ.
ಬಾಗೇಪಲ್ಲಿಯಲ್ಲಿ ರಾಸುಗಳಿಗೆ ಸಾಂಕ್ರಾಮಿಕ ರೋಗ: ರೈತರಲ್ಲಿ ಆತಂಕ - Infectious Disease for Cattle
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಇತ್ತೀಚೆಗೆ ಎಡಬಿಡದೆ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಜನ, ಜಾನುವಾರುಗಳಿಗೆ ಹಲವಾರು ರೋಗಗಳು ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಸುಗಳಿಗೆ ಸಾಂಕ್ರಾಮಿಕ ರೋಗ
ಈ ರೋಗ ಒಂದರಿಂದ ಮತ್ತೊಂದು ರಾಸುವಿಗೆ ಹರಡುತ್ತಿದೆ. ರೈತರು ಮಳೆಗಾಲದಲ್ಲಿ ಉತ್ತಮ ಮೇವು ಸಿಗುತ್ತದೆ ಎಂದು ಹಸುಗಳನ್ನು ಸಾಕಿ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದರು. ಆದರೆ ರಾಸುಗಳಿಗೆ ರೋಗ ತಗುಲಿರುವುದು ಈಗ ಅನ್ನದಾತರ ಆತಂಕಕ್ಕೆ ಕಾರಣವಾಗಿದೆ.
ಪಶುವೈದ್ಯರು ಸೂಕ್ತ ಚಿಕಿತ್ಸೆ ನೀಡಿ ರೈತರಿಗೆ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ. ಆದರೆ ಪಶು ಇಲಾಖೆ ಅಧಿಕಾರಿಗಳು ಒಂದು ಚುಚ್ಚು ಮದ್ದಿಗೆ ಇಂತಿಷ್ಟು ಎಂದು ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪ ಸಹ ಕೇಳಿ ಬಂದಿದೆ.