ಚಿಕ್ಕಬಳ್ಳಾಪುರ:ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ತಾಲೂಕು ವ್ತಾಪ್ತಿಯಲ್ಲಿ ಗೋಶಾಲೆಯನ್ನು ಉದ್ಘಾಟನೆ ಮಾಡಿದ್ದು ಮೊದಲನೇ ದಿನವೇ 230 ರಾಸುಗಳನ್ನು ಸೇರ್ಪಡೆಗೊಳ್ಳುವುದರ ಮೂಲಕ ಶುಭಾರಂಭ ಮಾಡಿದ್ದಾರೆ.
ಬಾಗೇಪಲ್ಲಿ ಶಾಸಕರಿಂದ ಗೋಶಾಲೆ ಉದ್ಘಾಟನೆ: ಮೊದಲ ದಿನವೇ ಗೋಶಾಲೆಗೆ ಬಂತು 230 ಜಾನುವಾರುಗಳು.. ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಹುಣಸೇ ತೋಪಿನಲ್ಲಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಕಂದಾಯ ಇಲಾಖೆ, ಪಶುಪಾಲನಾ ಇಲಾಖೆ ಇವರ ಸಹಯೋಗದಲ್ಲಿ ಗೋಶಾಲೆಯನ್ನು ಪ್ರಾರಂಭ ಮಾಡಿದ್ದು ಶಾಸಕ ಸುಬ್ಬಾರೆಡ್ಡಿ ಉದ್ಘಾಟನೆ ಮಾಡಿದ್ದಾರೆ.
ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಗುಡಿಬಂಡೆ ತಾಲೂಕಿನಲ್ಲಿ ಜನ-ಜಾನುವಾರುಗಳು ನೀರಿಲ್ಲದೇ ಪರದಾಡುವಂತಾಗಿದ್ದು, ಜಾನುವಾರುಗಳು ಮೇವಿಲ್ಲದೇ ಸಾಯುವಂತಹ ದುಸ್ಥಿತಿಯಲ್ಲಿವೆ. ಇದರ ಅಲುವಾಗಿಯೇ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸಿದ್ದು ಅವುಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಕೆಂದು ಹಾಗೂ ಹಿಂದೂ ಸಂಪ್ರದಾಯದಂತೆ ಗೋವಿನಲ್ಲಿ ಅನೇಕ ದೇವರುಗಳಿವೆ ಎಂಬ ನಂಬಿಕೆಯಿದ್ದು, ಇಂದು ಈ ಗೋವುಗಳಿಗೆ ಮೇವು ಮತ್ತು ನೀರಿನ ಸಮಸ್ಯೆಯಾಗಿರುವುದರಿಂದ ಪ್ರತಿ ಹೋಬಳಿಯಲ್ಲೂ ಗೋಶಾಲೆಗಳನ್ನು ಸರ್ಕಾರದ ವತಿಯಿಂದ ತೆರೆಯಲಾಗುತ್ತಿದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಇನ್ನೂ ಗೋಶಾಲೆ ಪ್ರಾರಂಭದ ದಿನವೇ 230 ಜಾನುವಾರುಗಳು ಸೇರ್ಪಡೆಗೊಂಡಿದ್ದು ನಂತರ 500ಕ್ಕೂ ಹೆಚ್ಚಿನ ಜಾನುವಾರುಗಳು ಬರುವ ನಿರೀಕ್ಷೆ ಇದ್ದು, ಎಲ್ಲಾ ಧನಕರುಗಳಿಗೆ ಹುಲ್ಲನ್ನು ಶೇಖರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.