ಕರ್ನಾಟಕ

karnataka

ETV Bharat / state

55 ಲಕ್ಷ ವೆಚ್ಚದ ಕೋವಿಡ್​ ಆರೋಗ್ಯ ಕೇಂದ್ರ ಉದ್ಘಾಟಿಸಿದ ಶಾಸಕ ಕೃಷ್ಣ ರೆಡ್ಡಿ - chikkaballapur latest news

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಕೋವಿಡ್​ ಆರೋಗ್ಯ ಕೇಂದ್ರ ಹಾಗೂ ರಸ್ತೆ ಕಾಮಗಾರಿ ಶಾಸಕ ಎಂ.ಕೃಷ್ಣ ರೆಡ್ಡಿ ಇಂದು ಚಾಲನೆ ನೀಡಿದರು.

Inauguration of covid Health Center in chintamani
ಆರೋಗ್ಯ ಕೇಂದ್ರ ಉದ್ಘಾಟಿಸಿದ ಶಾಸಕ ಕೃಷ್ಣ ರೆಡ್ಡಿ

By

Published : Sep 16, 2020, 6:38 PM IST

ಚಿಂತಾಮಣಿ:55 ಲಕ್ಷ ವೆಚ್ಚದ ಕೋವಿಡ್​ ಆರೋಗ್ಯ ಕೇಂದ್ರ, 8 ಲಕ್ಷ ವೆಚ್ಚದ ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಾಸಕ ಎಂ.ಕೃಷ್ಣ ರೆಡ್ಡಿ ಚಾಲನೆ ನೀಡಿದರು.

ಆರೋಗ್ಯ ಕೇಂದ್ರ ಉದ್ಘಾಟಿಸಿದ ಶಾಸಕ ಕೃಷ್ಣ ರೆಡ್ಡಿ

ನಗರಸಭೆಯ 2017-18ನೇ ಸಾಲಿನ 14ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಅಂಜನಿ ಬಡಾವಣೆಯ ಪಟಾಲಮ್ಮ ಮುಖ್ಯ ರಸ್ತೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಕೋವಿಡ್​ ಆರೋಗ್ಯ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾತ್ರೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಉಂಟಾಗುವ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಪ್ರತಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಆರೋಗ್ಯ ಕೇಂದ್ರವನ್ನು ಪ್ರಾರಂಭ ಮಾಡಲು ಸರ್ಕಾರದ ವತಿಯಿಂದ 55 ಲಕ್ಷ ರೂಪಾಯಿಗಳು ಹಣ ಬಿಡುಗಡೆಯಾಗಿದೆ ಎಂದು ಹೇಳಿದರು.

ಇನ್ನೂ ಪ್ರತಿಯೊಂದು ಹಾಸಿಗೆಗೂ ಮೆಡಿಕಲ್ ಗ್ಯಾಸ್ ಪೈಪ್ ಲೈನ್ ವ್ಯವಸ್ಥೆ ಅಳವಡಿಸಲಾಗಿದೆ. ರೋಗದ ಲಕ್ಷಣವಿರುವವರು ಹಾಗೂ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಕೃತಕ ಆಕ್ಸಿಜನ್ ನೀಡಿ, ತಾಲೂಕಿನಲ್ಲಿಯೇ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ಆಡಳಿತಾಧಿಕಾರಿ ಡಾ. ಸಂತೋಷ್, ಪೌರಾಯುಕ್ತ ಹರೀಶ್, ನಗರಸಭಾ ಸದಸ್ಯ ಮಂಜುನಾಥ್, ಶಂಕರ್, ಸಿ.ಕೆ.ಶಬ್ಬೀರ್, ಮಾಜಿ ನಗರಸಭಾ ಸದಸ್ಯ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಭಾಸ್ಕರ್, ಆಯಿಷ್ ಸುಲ್ತಾನ ಇದ್ದರು.

ABOUT THE AUTHOR

...view details