ಕರ್ನಾಟಕ

karnataka

ETV Bharat / state

ಅಕ್ರಮ ಮದ್ಯ ಮಾರಾಟಕ್ಕಿಲ್ಲ ಕಡಿವಾಣ: ಮದ್ಯ ವ್ಯಸನಿಗಳ ಅಡ್ಡೆಗಳಾದ ಸರ್ಕಾರಿ ಶಾಲೆಗಳು - Bagepalli Illegal liquor sales News

ಕೊತ್ತಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮನೊಡ್ಡಂಪಲ್ಲಿ(ಕೊತ್ತಪಲ್ಲಿ) ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರುತ್ತಿದ್ದು, ಸರ್ಕಾರಿ ಶಾಲೆಯೇ ಮದ್ಯವ್ಯಸನಿಗಳ ಅಡ್ಡವಾಗಿ ಮಾರ್ಪಟ್ಟಿದೆ.

ಮದ್ಯ ವ್ಯಸನಿಗಳ ಅಡ್ಡವಾದ ಸರ್ಕಾರಿ ಶಾಲೆಗಳು
ಮದ್ಯ ವ್ಯಸನಿಗಳ ಅಡ್ಡವಾದ ಸರ್ಕಾರಿ ಶಾಲೆಗಳು

By

Published : Aug 17, 2020, 8:52 AM IST

ಬಾಗೇಪಲ್ಲಿ: ತಾಲೂಕಿನ ಗಡಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಹಲವು ಬಾರಿ ದೂರುಗಳು ಕೇಳಿ ಬರುತ್ತಲೇ ಇವೆ. ಆದರೆ, ಇದಕ್ಕೆ ಕಡಿವಾಣ ಮಾತ್ರ ಬೀಳುತ್ತಿಲ್ಲ.

ಕೊತ್ತಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮನೊಡ್ಡಂಪಲ್ಲಿ(ಕೊತ್ತಪಲ್ಲಿ) ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರುತ್ತಿದ್ದು, ಸರ್ಕಾರಿ ಶಾಲೆಯೇ ಮದ್ಯವ್ಯಸನಿಗಳ ಅಡ್ಡವಾಗಿ ಮಾರ್ಪಟ್ಟಿದೆ. ಶಾಲೆಯ ಪಕ್ಕದಲ್ಲೇ ಮದ್ಯ ಮಾರಾಟ ಮಾಡಲಾಗುತ್ತಿದೆ. ನೆರೆಯ ಆಂಧ್ರಪ್ರದೇಶದ ಗ್ರಾಮಗಳಿಂದ ಜನರು ಗುಂಪುಗಳಲ್ಲಿ ಬಂದು ಶಾಲೆಯನ್ನೇ ಕುಡುಕರ ಅಡ್ಡೆಯಾಗಿಸಿಕೊಂಡಿದ್ದಾರೆ. ಶಾಲಾ ಆವರಣದಲ್ಲಿ ಮದ್ಯದ ಪ್ಯಾಕೆಟ್, ಪ್ಲಾಸ್ಟಿಕ್ ಕವರ್ ಗಳನ್ನು ಬಿಸಾಡುತ್ತಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಇದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮುಮ್ಮಡಿವಾರಪಲ್ಲಿ, ಪೆಸಲಪರ್ತಿ, ಕೊತ್ತಕೋಟೆ, ಕೊಲಿಂಪಲ್ಲಿಗಳಲ್ಲಿ ಅಕ್ರಮ ಮದ್ಯ ಮಾರಾಟವು ಮಿತಿ ಮೀರಿದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ಬಂದಿತ್ತು. ಅವರ ಸೂಚನೆಯ ಮೇರೆಗೆ ಕೆಲ ದಿನಗಳು ಕೆಲವೆಡೆ ಅಕ್ರಮ ಮದ್ಯ ಮಾರಾಟ ತಡೆಗೆ ಪ್ರಯತ್ನಿಸಲಾಯಿತು. ಆದರೆ, ಪೂರ್ಣ ಪ್ರಮಾಣದ ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂದು ಆರೋಪಿಸಲಾಗಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ABOUT THE AUTHOR

...view details