ಚಿಕ್ಕಬಳ್ಳಾಪುರ :ಸರ್ಕಾರಿ ಕೆಲಸಗಳನ್ನು ಮಾಡಿಕೊಡಲು ಅಧಿಕಾರಿಗಳು ಹಣಕ್ಕಾಗಿ ಪೀಡಿಸುತ್ತಿದ್ದರೆ ಹಾಗೂ ಕೆಲಸ ಮಾಡಿಕೊಡಲು ತಡ ಮಾಡುತ್ತಿದ್ದರೆ ಕೂಡಲೇ ಭ್ರಷ್ಟಾಚಾರ ನಿಗ್ರಹದಳಕ್ಕೆ ನಿರ್ಭಯವಾಗಿ ದೂರು ನೀಡಬಹುದೆಂದು ಎಸಿಬಿ ಅಧಿಕಾರಿ ಶಿವಮಲ್ಲಯ್ಯ ಚಿಂತಾಮಣಿತಿಳಿಸಿದರು.
ಅಧಿಕಾರಿಗಳು ಲಂಚ ಬೇಡಿಕೆ ಇಟ್ಟರೆ ಕೂಡಲೇ ದೂರು ನೀಡಿ : ಎಸಿಬಿ ಅಧಿಕಾರಿ ಶಿವಮಲ್ಲಯ್ಯ - Kannada news, Etv Bharat, ಅಧಿಕಾರಿ, ಲಂಚ,ACB Officer, Shivamallayya, Bribe, ಶಿವಮಲ್ಲಯ್ಯ ಚಿಂತಾಮಣಿ, Officers, ಎಸಿಬಿ ಅಧಿಕಾರಿ,
ಸರ್ಕಾರಿ ಇಲಾಖೆಗಳಲ್ಲಿ ಕಾನೂನು ಬದ್ಧವಾಗಿ ಕೆಲಸ ಮಾಡಿಕೊಡಲು ಸರ್ಕಾರ ನಿಗದಿ ಪಡಿಸಿದ ಮೊತ್ತವನ್ನು ಬಿಟ್ಟು ಹೆಚ್ಚು ಮೊತ್ತವನ್ನು ನೀಡುವಂತಿಲ್ಲಾ ಎಂದು ಎಸಿಬಿ ಅಧಿಕಾರಿ ಶಿವಮಲ್ಲಯ್ಯ ಚಿಂತಾಮಣಿ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯನ್ನು ಏರ್ಪಡಿಸಿದ್ದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕಾರ ಮಾಡಲಾಯಿತು. ಸರ್ಕಾರಿ ಇಲಾಖೆಗಳಲ್ಲಿ ಕಾನೂನು ಬದ್ಧವಾಗಿ ಕೆಲಸ ಮಾಡಿಕೊಡಲು ಸರ್ಕಾರ ನಿಗದಿ ಪಡಿಸಿದ ಮೊತ್ತವನ್ನು ಬಿಟ್ಟರೆ ಅಧಿಕಾರಿಗಳು ಹೆಚ್ಚು ಮೊತ್ತವನ್ನು ನೀಡುವಂತಿಲ್ಲಾ. ಒಂದು ವೇಳೆ ಏನಾದರು ಹಣವನ್ನು ಕೇಳಿದರೆ, ಯಾವುದೇ ವಿಳಂಬ ಮಾಡಿದರೆ ನಮ್ಮ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನೂ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ 25 ಕ್ಕೂ ಅಧಿಕ ಅಹವಾಲುಗಳನ್ನು ಸ್ವೀಕಾರ ಮಾಡಲಾಯಿತು. ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು. ಎಸಿಬಿ ಇನ್ಸ್ಪೆಕ್ಟರ್ ಲಕ್ಷ್ಮಿದೇವಿ ಮತ್ತಿತ್ತರರು ಸಭೆಯಲ್ಲಿ ಹಾಜರಿದ್ದರು.
TAGGED:
ಎಸಿಬಿ ಇನ್ಸ್ಪೆಕ್ಟರ್