ಚಿಕ್ಕಬಳ್ಳಾಪುರ :ಪತ್ನಿಯನ್ನು ಪದೇಪದೆ ಚುಡಾಯಿಸಿದ ಕಾರಣ ಯುವಕನ್ನೊಬ್ಬನನ್ನು ಪತಿರಾಯ ಬರ್ಬರವಾಗಿ ಕೊಲೆ ಮಾಡಿ ಸುಟ್ಟು ಹಾಕಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಂಬಾಲಹಳ್ಳಿಯಲ್ಲಿ ನಡೆದಿದೆ.
ಮುತ್ತಕದಹಳ್ಳಿ ಗ್ರಾಮದ ಶಂಕರ್ (28) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಹಲವು ತಿಂಗಳಿಂದ ಅಶೋಕ್ ಎಂಬಾತನ ಪತ್ನಿಯನ್ನು ಶಂಕರ್ ಪದೇಪದೆ ಚುಡಾಯಿಸುತ್ತಿದ್ದ.
ಶಂಕರ್‌ಗೆ ಸಾಕಷ್ಟು ಬಾರಿ ತಿಳಿ ಹೇಳಲಾಗಿದ್ದರೂ ತನ್ನ ಚಾಳಿ ಮುಂದುವರೆಸಿದ್ದ. ಇದರಿಂದ ಕೆರಳಿದ ಅಶೋಕ್ ಕಂಬಾಲಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಶಂಕರ್ನನ್ನು ಕೊಲೆ ಮಾಡಿ ನಂತರ ಸುಟ್ಟು ಹಾಕಿದ್ದಾನೆ.