ಚಿಕ್ಕಬಳ್ಳಾಪುರ:ನಾಡ ಬಂದೂಕು ಬಳಸಿ ಕಾಡು ಪ್ರಾಣಿಗಳನ್ನು ಭೇಟೆಯಾಡುತ್ತಿದ್ದ ನಾಲ್ವರನ್ನ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ನಾಡ ಬಂದೂಕು ಬಳಸಿ ಕಾಡು ಪ್ರಾಣಿಗಳ ಭೇಟೆ: ನಾಲ್ವರ ಬಂಧನ - Chikkaballapur news
ನಾಡ ಬಂದೂಕು ಬಳಸಿ ಕಾಡು ಪ್ರಾಣಿಗಳನ್ನು ಭೇಟೆಯಾಡುತ್ತಿದ್ದ ನಾಲ್ವರನ್ನ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಗೊಳ್ಳು ಗ್ರಾಮದ ರಾಜಣ್ಣ (40), ಮುನಿರಾಜು (25) ಮುನಿರಾಜ (29) ಹಾಗೂ ಇನುಪನಹಳ್ಳಿ ಗ್ರಾಮದ ದೇವರಾಜು (30) ಬಂಧಿತರು. ಗೌರಿಬಿದನೂರು ತಾಲೂಕು ಮೇಳ್ಯಾ ಗ್ರಾಮದಲ್ಲಿ ಇತ್ತೀಚೆಗೆ ಹೆಚ್ಚು ಕಳವು ಪ್ರಕರಣಗಳು ವರದಿಯಾಗುತ್ತಿರುವುದರಿಂದ ಪೊಲೀಸರು ಈ ಗ್ರಾಮದ ವ್ಯಾಪ್ತಿಯಲ್ಲಿ ಗುಸ್ತು ನಿರ್ವಹಿಸುತ್ತಿದ್ದರು. 2 ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರನ್ನ ಪೊಲೀಸರು ಬಂಧಿಸಿದ್ದರು. ಬಂಧಿಸಿ ವಿಚಾರಣೆ ನಡೆಸುತ್ತಿದ್ದ ವೇಳೆ ಕಾಡು ಪ್ರಾಣಿಗಳನ್ನು ಭೇಟೆಯಾಡಲು ಬಂದಿರುವುದಾಗಿ ಇವರೆಲ್ಲ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ಇವರ ಬಳಿಯಿದ್ದ ಎಸ್ಬಿಎಂಎಲ್ ನಾಡ ಬಂದೂಕು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.