ಕರ್ನಾಟಕ

karnataka

ETV Bharat / state

ಪ್ರೀತಿಸಿ ಮದುವೆ ಆದವಳು ಅನುಮಾನಾಸ್ಪದ ಸಾವು : ಪತಿಯಿಂದಲೇ ಕೊಲೆ!? - chikkaballapura wife death case

ಪ್ರೀತಿಸಿ ಮದುವೆಯಾಗಿದ್ದವಳು ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದು, ಪತಿಯಿಂದಲೇ ಕೊಲೆಯಾದ ಆರೋಪ ಕೇಳಿ ಬಂದಿದೆ..

house-wife-suspected-death-in-chikkaballapura
ಪ್ರೀತಿಸಿ ಮದುವೆಯಾದವಳು ಅನುಮಾನಾಸ್ಪದ ಸಾವು: ಪತ್ನಿಯಿಂದಲೇ ಕೊಲೆ?

By

Published : Jun 4, 2022, 5:29 PM IST

ಚಿಕ್ಕಬಳ್ಳಾಪುರ :ಒಂದು ವರ್ಷದ ಹಿಂದೆ ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಗರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ನಗರದ ಶೆಟ್ಟಳ್ಳಿ ಬಡಾವಣೆಯಲ್ಲಿ‌ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಆಚೇಪಲ್ಲಿ ಮೂಲದ ಅನುಷಾ (21) ಮೃತಪಟ್ಟವಳು.

ಕಳೆದ ವರ್ಷ ಪೋಷಕರ ವಿರೋಧದ ನಡುವೆಯೂ ಅನುಷಾ, ಅಭಿಲಾಷ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ನಗರದ 9ನೇ ವಾರ್ಡಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ದಂಪತಿ ವಾಸವಾಗಿದ್ದರು. ಅಭಿಲಾಶ್ ಕಲ್ಲು ಕ್ವಾರಿಯಲ್ಲಿ ರೈಟರ್ ಕೆಲಸ ಮಾಡುತ್ತಿದ್ದ.

ಲಾರಿಯೊಂದನ್ನು ಖರೀದಿಸುವ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಅಭಿಲಾಷ್ ತಮ್ಮ ಮಗಳನ್ನು ಕೊಲೆ ಮಾಡಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಯುವತಿಯ ಪೋಷಕರು ಆರೋಪ ಮಾಡಿದ್ದಾರೆ.

ಶುಕ್ರವಾರ ತಡರಾತ್ರಿ ಅನುಷಾ ಶವವಾಗಿ ಪತ್ತೆಯಾಗಿದ್ದು, ಆಕೆಯ ಬಲ ಕಿವಿಯೂ ಕಟ್​ ಆಗಿದೆ ಎನ್ನಲಾಗಿದೆ. ಪೋಷಕರು ಅಭಿಲಾಷ್ ವಿರುದ್ಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಕೊಲೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಘಟನೆ ಸಂಬಂಧ ಸ್ಥಳಕ್ಕೆ​​ ಭೇಟಿ ನೀಡಿದ ಪೊಲೀಸರು ಅಭಿಲಾಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಯು ಆತ್ಮಹತ್ಯೆ ಮಾಡಿಕೊಂಡಿದ್ದು, ನನಗೇನು ಸಂಬಂಧವಿಲ್ಲ ಅಂತಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿ :ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ.. ವರದಕ್ಷಿಣೆ ಕಿರುಕುಳ ಆರೋಪ

ABOUT THE AUTHOR

...view details