ಚಿಕ್ಕಬಳ್ಳಾಪುರ:ತಡರಾತ್ರಿ ಸುರಿದ ಮಳೆಗೆ ಮನೆ ಮೇಲ್ಛಾವಣಿ ಕುಸಿದು ವೃದ್ಧನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಜಾತವಾರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ: ಮನೆ ಮೇಲ್ಛಾವಣಿ ಕುಸಿದು ವೃದ್ಧ ಸಾವು - House roof collapse
ಚಿಕ್ಕಬಳ್ಳಾಪುರದಲ್ಲಿ ಮಳೆಯಾಗುತ್ತಿದ್ದು, ನಿನ್ನೆ ಸುರಿದ ಮಳೆಯಿಂದ ಮನೆ ಮೇಲ್ಛಾವಣಿ ಕುಸಿದು ವೃದ್ಧನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಜಾತವಾರ ಗ್ರಾಮದಲ್ಲಿ ನಡೆದಿದೆ.
Chikkaballapura
ಜಾತವಾರ ಗ್ರಾಮದ ಕೃಷ್ಣಪ್ಪ (65) ಮೃತ ವೃದ್ಧ. ಮೃತ ಕೃಷ್ಣಪ್ಪ ತನ್ನ ಪತ್ನಿ ಕೇಶವಮ್ಮ ಜೊತೆ ಮನೆಯಲ್ಲಿ ಮಲಗಿದ್ದಾಗ ಸಂಜೆಯಿಂದ ಸುರಿಯುತ್ತಿದ್ದ ಭಾರೀ ಮಳೆಗೆ ತಡರಾತ್ರಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಕೃಷ್ಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊರೊನಾ ಸೋಂಕಿನ ಪರಿಣಾಮ ವೃದ್ಧನ ಮೃತದೇಹವನ್ನು ಮುಟ್ಟಲು ಗ್ರಾಮಸ್ಥರು ಮುಂದೆ ಬರುತ್ತಿಲ್ಲ ಎಂದು ತಿಳಿದು ಬಂದಿದೆ.